ಎಫ್'ಐಎಚ್ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಾತ್ರಾ ಪಾತ್ರರಾಗಿದ್ದಾರೆ. ಬಾತ್ರಾ ನಾಯಕತ್ವದಲ್ಲಿ ಹಾಕಿ ವಿಶ್ವದೆಲ್ಲೆಡೆ ಪಸರಿಸಲಿದೆ.- ವಿಜಯ್ ಗೋಯೆಲ್

ನವದೆಹಲಿ(ನ.18): ಇತ್ತೀಚೇಗಷ್ಟೇ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌'ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಾಕಿ ಇಂಡಿಯಾ ಮುಖ್ಯಸ್ಥ ನರೀಂದರ್ ಬಾತ್ರಾ ಅವರಿಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅಭಿನಂದನೆ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಫ್'ಐಎಚ್ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಾತ್ರಾ ಪಾತ್ರರಾಗಿದ್ದಾರೆ. ಬಾತ್ರಾ ನಾಯಕತ್ವದಲ್ಲಿ ಹಾಕಿ ವಿಶ್ವದೆಲ್ಲೆಡೆ ಪಸರಿಸಲಿದೆ ಎಂದು ವಿಜಯ್ ಗೋಯೆಲ್ ಹೇಳಿದ್ದಾರೆ.

ಸದ್ಯ ಕೆಲವೊಂದು ರಾಷ್ಟ್ರಗಳಲ್ಲಿ ಮಾತ್ರ ಹಾಕಿ ಕ್ರೀಡೆಯನ್ನು ಆಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾತ್ರಾ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆ ಗಣನೀಯವಾಗಿ ಏರಿಕೆ ಕಾಣುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.