ಜೋಹಾನ್ಸ್‌ಬರ್ಗ್‌(ಜ.15): ಪಾಕಿಸ್ತಾನ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯನ್ನು ದಕ್ಷಿಣ ಆಫ್ರಿಕಾ 3-0ಯಿಂದ ಕ್ಲೀನ್‌ ಸ್ವೀಪ್‌ ಮಾಡಿದೆ. ಸೋಮವಾರ ಮುಕ್ತಾಯಗೊಂಡ 3ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ 107 ರನ್‌ಗಳ ಗೆಲುವು ಸಾಧಿಸಿತು. ದ.ಆಫ್ರಿಕಾ ತಂಡ ಪಾಕಿಸ್ತಾನಕ್ಕೆ 381 ರನ್‌ಗಳ ಗುರಿ ನೀಡಿತ್ತು. ಪಂದ್ಯದ 4ನೇ ದಿನವಾದ ಸೋಮವಾರ 3 ವಿಕೆಟ್‌ಗೆ 153 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರಿಸಿದ ಪಾಕಿಸ್ತಾನ 273 ರನ್‌ ಗಳಿಸಿ ಆಲೌಟ್‌ ಆಯಿತು. ದ.ಆಫ್ರಿಕಾ ಪರ ಆಲಿವರ್‌ ಮತ್ತು ರಬಾಡಾ ತಲಾ 3 ವಿಕೆಟ್‌ ಪಡೆದರು.

ಇದನ್ನೂ ಓದಿ: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ತಂಡ ಪ್ರಕಟಿಸಿದ ಬಿಸಿಸಿಐ!

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ಆಫ್ರಿಕಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಡುಯಾನೆ ಒಲಿವರ್ ಮಾರಕ ದಾಳಿ ಹಾಗೂ ಹಾಶಿಮ್ ಆಮ್ಲಾ, ಡಿನ್ ಎಲ್ಗರ್ ಬ್ಯಾಟಿಂಗ್ ನೆರವಿನಿಂದ ಸೌತ್ಆಫ್ರಿಕಾ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿತ್ತು.

ಇದನ್ನೂ ಓದಿ:ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್

ಕೇಪ್‌ಟೌನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೌತ್ಆಫ್ರಿಕಾ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇಷ್ಟೇ ಅಲ್ಲ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ನಾಯಕ ಫಾಫ್ ಡುಪ್ಲೆಸಿಸ್ ಶತಕ, ಡೇಲ್ ಸ್ಟೇನ್ ಹಾಗೂ ಕಾಗಿಸೋ ರಬಾಡ ದಾಳಿಯಿಂದ ಪಾಕಿಸ್ತಾನ ತತ್ತರಿಸಿತ್ತು.