ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ತಂಡ ಪ್ರಕಟಿಸಿದ ಬಿಸಿಸಿಐ!
3 ದಿನಗಳ ಅಭ್ಯಾಸ ಪಂದ್ಯಕ್ಕೆ ಬಿಸಿಸಿಐ ತಂಡ ಪ್ರಕಟಿಸಿದೆ. ತಿರುವನಂತಪುರದಲ್ಲಿ ಆಯೋಜಿಸಿರುವ ಇಂಗ್ಲೆಂಡ್ ಲಯನ್ಸ್ ವಿರುದ್ದದ ಪ್ರಾಕ್ಟೀಸ್ ಗೇಮ್‌ಗೆ ಬಲಿಷ್ಠ ತಂಡವನ್ನ ಬಿಸಿಸಿಐ ಪ್ರಕಟಿಸಿದೆ.
ನವದೆಹಲಿ(ಜ.15): ಇಂಗ್ಲೆಂಡ್ ಲಯನ್ಸ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಬಿಸಿಸಿಐ ಅಧ್ಯಕ್ಷರ ಇಲೆವೆನ್ ತಂಡವನ್ನು ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುನ್ನಡೆಸಲಿದ್ದಾರೆ. ಜ.18ರಿಂದ 20ರವರೆಗೆ ತಿರುವನಂತಪುರದಲ್ಲಿ ಅಭ್ಯಾಸ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗನಿಂದ ಅನುಮಾನಾಸ್ಪದ ಬೌಲಿಂಗ್..!
‘ಮಂಗಳವಾರದಿಂದ ಆರಂಭವಾಗಲಿರುವ ರಣಜಿ ಕ್ವಾರ್ಟರ್ ಫೈನಲ್‌ನಲ್ಲಿ ಪಾಲ್ಗೊಳ್ಳಲಿರುವ ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ’ ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ರಣಜಿ ಕ್ವಾರ್ಟರ್ ಫೈನಲ್ ಆಡುತ್ತಿರುವ ಕ್ರಿಕೆಟಿಗರು ಈ ಅಭ್ಯಾಸ ಪಂದ್ಯಕ್ಕೆ ಲಭ್ಯರಿಲ್ಲ. ಈಗಾಗಲೇ ರಣಜಿ ಟೂರ್ನಿಯಿಂದ ನಿರ್ಗಮಿಸಿದ ತಂಡದ ಪ್ರಮುಖ ಕ್ರಿಕೆಟಿಗರನ್ನ ಇಂಗ್ಲೆಂಡ್ ಲಯನ್ಸ್ ವಿರುದ್ದದ ಅಭ್ಯಾಸ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಮಯಾಂಕ್ ಅಗರ್’ವಾಲ್ ಜತೆ 10 ಮಾತು ನೂರು ದನಿ..!
ತಂಡ: ಇಶಾನ್ ಕಿಶನ್(ನಾಯಕ), ರಿತುರಾಜ್ ಗಾಯಕ್ವಾಡ್, ಅನ್ಮೋಲ್‌ಪ್ರೀತ್ ಸಿಂಗ್, ದೀಪಕ್ ಹೂಡಾ, ರಜತ್ ಪಟ್ಟಿದಾರ್, ರಿಕಿ ಭುಯಿ, ಹಿಮ್ಮತ್ ಸಿಂಗ್, ಮಯಾಂಕ್ ಮಾರ್ಕಂಡೆ, ಜಯಂತ್ ಯಾದವ್, ಪಪ್ಪು ರಾಯ್, ಪಂಕಜ್ ಜೈಸ್ವಾಲ್, ತುಷಾರ್ ದೇಶಪಾಂಡೆ, ನವದೀಪ್ ಸೈನಿ.