ಕಾಂಗರುಗಳನ್ನು ಮಣಿಸಿದ ಹರಿಣಗಳು; ಸರಣಿ ಸಮ

South Africa vs Australia Kagiso Rabada Man of the Match performance helps Proteas win second Test
Highlights

101 ರನ್'ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕ ಕೇವಲ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯದ ನಗೆ ಬೀರಿತು. ಪಂದ್ಯದಲ್ಲಿ 11 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ರಬಾಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಪೋರ್ಟ್ ಎಲೆಜಿಬೆತ್(ಮಾ.12): ಕಗಿಸೊ ರಬಾಡ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್'ಗಳ ಭರ್ಜರಿ ಜಯ ದಾಖಲಿಸಿದೆ.

101 ರನ್'ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕ ಕೇವಲ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯದ ನಗೆ ಬೀರಿತು. ಪಂದ್ಯದಲ್ಲಿ 11 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ರಬಾಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್'ನಲ್ಲಿ 243 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಎಬಿ ಡಿವಿಲಿಯರ್ಸ್ ಅಜೇಯ ಶತಕದ ನೆರವಿನಿಂದ 382 ರನ್ ಬಾರಿಸುವುದರೊಂದಿಗೆ ಆಫ್ರಿಕಾ 139 ರನ್'ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್'ನಲ್ಲೂ ಆಸೀಸ್ ಪಡೆಯನ್ನು ಕಾಡಿದ ರಬಾಡ 6 ವಿಕೆಟ್ ಪಡೆದು ಮಿಂಚಿದರು. ಅಲ್ಲದೇ ಆಸೀಸ್ ಪಡೆಯನ್ನು ಕೇವಲ 239ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಸುಲಭ ಗುರಿ ಬೆನ್ನತ್ತಿದ ಆಫ್ರಿಕಾ 4 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಈ ಜಯದೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿವೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ 243&239

ದ.ಆಫ್ರಿಕಾ 382&102/4

ಫಲಿತಾಂಶ: ದಕ್ಷಿಣ ಆಫ್ರಿಕಾಗೆ 6 ವಿಕೆಟ್'ಗಳ ಜಯ

loader