Asianet Suvarna News Asianet Suvarna News

#INDvSA ಟಿ20: ಸೌತ್ ಆಫ್ರಿಕಾಗೆ ಸುಲಭ ಗುರಿ ನೀಡಿದ ಭಾರತ!

ಸೌತ್ ಆಫ್ರಿಕಾ ವಿರುದ್ದದ 3ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುವಲ್ಲಿ ವ ವಿಫಲವಾಗಿದೆ. ಹರಿಣಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 134 ರನ್ ಸಿಡಿಸಿ ಸುಲಭ ಗುರಿ ನೀಡಿದೆ.

South Africa restrict team india by 134 runs in bengaluru t20 match
Author
Bengaluru, First Published Sep 22, 2019, 8:40 PM IST | Last Updated Sep 22, 2019, 8:40 PM IST

ಬೆಂಗಳೂರು(ಸೆ.22): ಸೌತ್ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ.  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡಕ್ಕೆ ಸುಲಭ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ 9 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ನೀಡಿದ ಶಿಖರ್ ಧವನ್ 36 ರನ್ ಕಾಣಿಕೆ ನೀಡಿದರು. ಧವನ್ ಪೆವಿಲಿಯನ್ ಸೇರಿದ ಬೆನ್ನಲ್ಲೇ, ನಾಯಕ ವಿರಾಟ್ ಕೊಹ್ಲಿ 9 ರನ್ ಸಿಡಿಸಿ ನಿರ್ಗಮಿಸಿದರು.

68 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ರಿಷಬ್ ಪಂತ್ 19 ರನ್ ಸಿಡಿಸಿ ಚೇತರಿಕೆ ನೀಡೋ ಪ್ರಯತ್ನ ಮಾಡಿದರು. ಶ್ರೇಯಸ್ ಅಯ್ಯರ್ 5, ಕ್ರುನಾಲ್ ಪಾಂಡ್ಯ 4 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ 19 ರನ್ ಸಿಡಿಸಿದರು. ಹಾರ್ದಿಕ್ ಪಾಂಡ್ಯ 14 ರನ್ ಕಾಣಿಕೆ ನೀಡಿದರು. ಈ ಮೂಲಕ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 134 ರನ್ ಸಿಡಿಸಿತು. ಇದೀಗ ಸೌತ್ ಆಫ್ರಿಕಾ ಗೆಲುವಿಗೆ 125 ರನ್ ಸಿಡಿಸಬೇಕಿದೆ. 
 

Latest Videos
Follow Us:
Download App:
  • android
  • ios