ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ರೇಸಲ್ಲಿ ಜಾಂಟಿ ರೋಡ್ಸ್
ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರವನ್ನು ಸ್ವತಃ ರೋಡ್ಸ್ ಖಚಿತಪಡಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮುಂಬೈ[ಜು.25]: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತಂಡದ ಪ್ರಧಾನ ಕೋಚ್ ಸೇರಿದಂತೆ ಫೀಲ್ಡಿಂಗ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್‌ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಫೀಲ್ಡಿಂಗ್ ಕೋಚ್ ಹುದ್ದೆಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ವಿಶ್ವ ಕಂಡ ಶ್ರೇಷ್ಠ ಕ್ಷೇತ್ರರಕ್ಷಕರಲ್ಲಿ ಒಬ್ಬರಾದ ಜಾಂಟಿ ರೋಡ್ಸ್ ಅರ್ಜಿ ಸಲ್ಲಿಸಿದ್ದಾರೆ.
ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್
ಸ್ವತಃ ಜಾಂಟಿ ರೋಡ್ಸ್ ಈ ವಿಷಯವನ್ನು ಖಚಿತ ಪಡಿಸಿದ್ದು, ‘ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಹಾಗೂ ನನ್ನ ಪತ್ನಿ ಭಾರತವನ್ನು ಪ್ರೀತಿಸುತ್ತೇವೆ. ಈ ದೇಶ ನನಗೆ ಸಾಕಷ್ಟು ನೀಡಿದೆ. 2 ಮಕ್ಕಳಿಗೂ ನನ್ನ ಹೆಂಡತಿ ಇಲ್ಲೇ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.
ಯಾರಾಗ್ತಾರೆ ಟೀಂ ಇಂಡಿಯಾ ಮುಂದಿನ ಕೋಚ್..?
ರೋಡ್ಸ್ ತಮ್ಮ ಪುತ್ರಿಗೆ ಇಂಡಿಯಾ ರೋಡಿಸ್ ಎಂದು ಹೆಸರಿಟ್ಟಿದ್ದು, ಇದು ಅವರಿಗೆ ಭಾರತದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತದೆ. ಐಪಿಎಲ್ ವೇಳೆ 9 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು.
‘ನಾನೊಬ್ಬ ಕೋಚ್ ಆಗಿದ್ದು, ಆಟಗಾರರಿಗೆ ತರಬೇತಿ ನೀಡುವುದನ್ನು ಇಷ್ಟಪಡುತ್ತೇನೆ. ಭಾರತ ವಿಶ್ವದಲ್ಲೇ ಅತ್ಯಂತ ಬ್ಯುಸಿಯಾಗಿರುವ ತಂಡವಾಗಿದ್ದು, ಬ್ಯುಸಿಯಾಗಿರುವುದಕ್ಕೆ ಇದೊಂದು ಒಳ್ಳೆಯ ಅವಕಾಶ’ ಎಂದಿದ್ದಾರೆ.