ಕೇಪ್ ಟೌನ್(ಏ.18): ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ. 15 ಸದಸ್ಯರ ಬಲಿಷ್ಠ ತಂಡವನ್ನು ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. 2015ರ ವಿಶ್ವಕಪ್ ಆಡಿದ 7 ಸದಸ್ಯರು 2019ರ ತಂಡಕ್ಕೂ ಆಯ್ಕೆಯಾಗಿದ್ದಾರೆ. ಈ ಮೂಲಕ ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಹಿರಿಯ ಹಾಗೂ ಯುವ ಆಟಗಾರರನ್ನು ಆಯ್ಕೆ ಮಾಡಿದೆ. ವಿಶೇಷ ಅಂದರೆ ಹಿರಿಯ ವೇಗಿ ಡೇಲ್ ಸ್ಟೇನ್ ಹಾಗೂ ಹಾಶಿಮ್ ಆಮ್ಲಾಗೆ ಸ್ಥಾನ ನೀಡಲಾಗಿದೆ. 

ಸೌತ್ಆಫ್ರಿಕಾ ತಂಡ:

ಫಾಫ್ ಡುಪ್ಲೆಸಿಸ್(ನಾಯಕ), ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಡೇಲ್ ಸ್ಟೇನ್, ಆ್ಯಂಡಿಲಿ ಫೆಲಿಕ್‌ವಾಯೋ, ಇಮ್ರಾನ್ ತಾಹಿರ್, ಕಗಿಸೋ ರಬಾಡ, ಡ್ವೇನ್ ಪ್ರಿಟೋರಿಯಸ್, ಕ್ವಿಂಟನ್ ಡಿಕಾಕ್, ಆ್ಯನ್ರಿಚ್ ನೊರ್ಜೆ, ಲುಂಗಿ ಎನ್‌ಗಿಡಿ, ಆಡೆನ್ ಮಾಕ್ರಮ್, ರಸಿ ವ್ಯಾಡ್ ಹುಸೈನ್, ಹಾಶಿಮ್ ಆಮ್ಲಾ, ತಬ್ರಾರಿಜ್ ಶಂಸಿ

 

 

2019ರ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿದ ತಂಡದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಮೂವರು ಕ್ರಿಕೆಟಿಗರಿಗೆ ಸ್ಥಾನ ನೀಡಲಾಗಿದೆ. ಫಾಪ್ ಡುಪ್ಲೆಸಿಸ್, ಇಮ್ರಾನ್ ತಾಹಿರ್, ಲುಂಗಿ ಎನ್‌ಗಿಡಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.  ವಿಶ್ವಕಪ್  ತಂಡ ಪ್ರಕಟಕ್ಕೂ ಮೊದಲು ವಿಶ್ವಕಪ್ ಟೂರ್ನಿಗೆ ಸೌತ್ಆಫ್ರಿಕಾ ತಂಡದ ಜರ್ಸಿ ಅನಾವರಣ ಮಾಡಲಾಯಿತು. ಹಸಿರು ಬಣ್ಣದ ನೂತನ ಜರ್ಸಿ ಹೆಚ್ಚು ಆಕರ್ಷಕ ಹಾಗೂ ವಿನೂತವಾಗಿದೆ. 

 ವಿಶ್ವಕಪ್ ಟೂರ್ನಿಯಲ್ಲಿ ಮೇ.30 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸೌತ್ಆಫ್ರಿಕಾ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸೌತ್ಆಫ್ರಿಕಾ ವಿಶ್ವಕಪ್ ಜರ್ನಿ ಆರಂಭಿಸಲಿದೆ.