ಶಾಸ್ತ್ರಿ ಮಾತಿಗೆ ಹೆಚ್ಚಿಗೆ ಏನೂ ಹೇಳಲಾರೆ, ಅವರನ್ನು 2019ರ ವಿಶ್ವಕಪ್'ವರೆಗೆ ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ನಾಯಕ ಗಂಗೂಲಿ ಹೇಳಿದ್ದಾರೆ.
ಕೋಲ್ಕತಾ(ಆ.06): ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಸೌರವ್ ಗಂಗೂಲಿ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಶಾಸ್ತ್ರಿಗೆ ದಾದಾ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.
ಪ್ರಸ್ತುತ ತಂಡದಲ್ಲಿ ಖ್ಯಾತ ನಾಮಾಂಕಿತರು ಇಲ್ಲದಿದ್ದರೂ ಕಳೆದೆರಡು ವರ್ಷಗಳಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದೆ. ಸುಮಾರು 20 ವರ್ಷದ ಬಳಿಕ ಲಂಕಾದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು ಎಂದು ಗಂಗೂಲಿಯ ಹೆಸರನ್ನು ಪ್ರಸ್ತಾಪಿಸದೇ ಶಾಸ್ತ್ರಿ ಟಾಂಗ್ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ದಾದಾ, '15 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ಸೋಲಿನ ರುಚಿ ತೋರಿಸಿದ್ದು ಯಾರೆಂಬುದು ಮರೆತಂತಿದೆ. ಅಲ್ಲದೇ 2007ರಲ್ಲಿ ಇಂಗ್ಲೆಂಡ್'ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿತ್ತು ಎನ್ನುವುದು ನೆನಪಿರಲಿ ಎಂದಿದ್ದಾರೆ.
ಶಾಸ್ತ್ರಿ ಮಾತಿಗೆ ಹೆಚ್ಚಿಗೆ ಏನೂ ಹೇಳಲಾರೆ, ಅವರನ್ನು 2019ರ ವಿಶ್ವಕಪ್'ವರೆಗೆ ಟೀಂ ಇಂಡಿಯಾ ಕೋಚ್ ಆಗಿ ನೇಮಿಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ನಾಯಕ ಗಂಗೂಲಿ ಹೇಳಿದ್ದಾರೆ.