ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇನ್ಸ್‌ಸ್ಟಾಗ್ರಾಂ ಅಕೌಂಟ್ ಒಪನ್ ಮಾಡಿದ್ದಾರೆ. ಇನ್ಸ್‌ಸ್ಟಾ ಸೇರಿದ ಒಂದೇ ದಿನಕ್ಕೆ ಗಂಗೂಲಿ ದಾಖಲೆ ಬರೆದಿದ್ದಾರೆ. 

ಮುಂಬೈ(ಜು.08): ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಕಂಡ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ 47ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ. ಗಂಗೂಲಿ ಹುಟ್ಟು ಹಬ್ಬಕ್ಕೆ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ. ಈ ವಿಶೇಷ ದಿನ ಗಂಗೂಲಿ, ಸಾಮಾಜಿಕ ಜಾಲತಾಣವಾದ ಇನ್ಸ್‌ಸ್ಟಾಗ್ರಾಂ ಖಾತೆಯನ್ನೂ ತೆರೆದಿದ್ದಾರೆ. 

ಇದನ್ನೂ ಓದಿ: ದಾದಾಗಿಂದು 47ನೇ ಹುಟ್ಟುಹಬ್ಬದ ಸಂಭ್ರಮ; ನೆನಪಿದೆಯಾ ಆ ಕ್ಷಣ..?

souravganguly ಹೆಸರಿನಲ್ಲಿ ದಾದಾ ನೂತನ ಇನ್ಸ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಈ ಮೂಲಕ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿರಲು ಇಚ್ಚಿಸಿದ್ದಾರೆ. ಖಾತೆ ತೆರದೆ ಮೊದಲ ದಿನವೇ ಗಂಗೂಲಿ 80,000 ಅಭಿಮಾನಿಗಳು, ಕ್ರಿಕೆಟಿಗರು ಫಾಲೋ ಮಾಡಿದ್ದಾರೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಫಾಲೋವರ್ಸ್ ಪಡದೆ ಹಗ್ಗೆಳಿಕೆಗೆ ಪಾತ್ರರಾಗಿದ್ದಾರೆ.

View post on Instagram

ಇದನ್ನೂ ಓದಿ: 'ದಾದಾ'ಗಿರಿಯ ಆನ್ ಫೀಲ್ಡ್ Untold ಸ್ಟೋರಿ

ಗಂಗೂಲಿ ಇನ್‌ಸ್ಟಾಗ್ರಾಂನಲ್ಲಿ 2 ಪೋಸ್ಟ್ ಹಾಕಲಾಗಿದೆ. ಇನ್ಸ್‌ಸ್ಟಾಗ್ರಾಂ ಖಾತೆ ತೆರೆದ ಬಳಿಕ ಕೇಕ್ ಕತ್ತರಿಸುತ್ತಿರುವ ಫೋಟೋ ಹಾಗೂ ಹುಟ್ಟು ಹಬ್ಬಕ್ಕೆ ಬಂಗಾಳಿಯಲ್ಲಿ ಶುಭಕೋರಿದ ಕೇಕ್ ಕತ್ತರಿಸುವ ವಿಡಿಯೋ ಹಾಕಿದ್ದಾರೆ. ಇನ್ಸ್‌ಸ್ಟಾ ಕೇಕ್ ಕತ್ತರಿಸುವ ಫೋಟೋಗೆ ಬರೋಬ್ಬರಿ 74,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.


View post on Instagram