ಕೋಲ್ಕತಾ[ಆ.03]: ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಒಂದಲ್ಲ ಒಂದು ದಿನ ಟೀಂ ಇಂಡಿಯಾದ ಕೋಚ್‌ ಆಗುವ ಇಚ್ಛೆ ಇದೆ ಎಂದಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಖಂಡಿತವಾಗಿಯೂ ಕೋಚ್‌ ಆಗುವ ಆಸೆ ಇದೆ. ಆದರೆ ಈ ಬಾರಿ ಸಾಧ್ಯವಿಲ್ಲ. ಇದೊಂದು ಹಂತ ಮುಗಿಯಲಿ. ಮುಂದಿನ ಬಾರಿ ನಾನು ಅರ್ಜಿ ಹಾಕುತ್ತೇನೆ. ಸದ್ಯಕ್ಕೆ ನಾನು ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ’ ಎಂದರು.

ಗಂಗೂಲಿ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಹಾಲಿ ಅಧ್ಯಕ್ಷರಾಗಿದ್ದು, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರಾಗಿದ್ದಾರೆ. ಟೀವಿ ವೀಕ್ಷಕ ವಿವರಣೆಗಾರರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.