ಕೋಲ್ಕತಾ[ಏ.14]: ನೋಬಾಲ್‌ ವಿವಾದ ಪ್ರಕರಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂ.ಎಸ್‌.ಧೋನಿ ಮೈದಾನಕ್ಕೆ ನುಗ್ಗಿ ಅಂಪೈರ್‌ ಜತೆ ವಾಗ್ವಾದ ನಡೆಸಿದ್ದನ್ನು, ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. 

ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್‌..!

‘ಧೋನಿಯೂ ಒಬ್ಬ ಮನುಷ್ಯ, ಸಿಟ್ಟಿನಿಂದ ಈ ರೀತಿ ಮಾಡಿದ್ದಾರೆ’ ಎಂದು ಗಂಗೂಲಿ ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ, ‘ಎಲ್ಲರೂ ಮನುಷ್ಯರೇ. ಆದರೆ ಧೋನಿಯ ಸ್ಪರ್ಧಾತ್ಮಕ ಗುಣವನ್ನು ಮೆಚ್ಚಿಕೊಳ್ಳಬೇಕು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ’ ಎಂದಿದ್ದಾರೆ. 

ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದ ವೇಳೆ ಅಂಪೈರ್‌ ಮೊದಲು ನೋಬಾಲ್‌ ನೀಡಿ, ಬಳಿಕ ನಿರ್ಧಾರ ಹಿಂಪಡೆದಿದ್ದಕ್ಕೆ ಧೋನಿ ಮೈದಾನಕ್ಕೆ ನುಗ್ಗಿ ವಾಗ್ವಾದ ನಡೆಸಿದ್ದರು.