ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ಬಳಿಕ ಮುಂದಿನ ತಿಂಗಳು ಧೋನಿ, ದುಬೈಗೆ ತೆರಳಲಿದ್ದು ತಮ್ಮ ಕ್ರಿಕೆಟ್ ತರಬೇತಿ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕ್ಲಬ್‌ನ ಕಾರ್ಯ ಚಟುವಟಿಕೆಗಳು, ಶಿಬಿರ ಸೇರಿದಂತೆ ಇತರೆ ವಿವರಗಳ ಕುರಿತು ಶೀಘ್ರದಲ್ಲೇ ಪಿಎಸ್‌ಸಿ ಮಾಹಿತಿ ನೀಡಲಿದೆ ಎಂದು ಹೇಳಲಾಗಿದೆ.

ದುಬೈ(ಆ.15): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಶೀಘ್ರದಲ್ಲೇ ದುಬೈನಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಿದ್ದಾರೆ. ಈ ಕುರಿತು ದುಬೈ ಮೂಲದ ಪೆಸಿಫಿಕ್ ಸ್ಪೋರ್ಟ್ಸ್ ಕ್ಲಬ್ (ಪಿಎಸ್‌ಸಿ) ಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ‘ಗಾಲ್ಫ್ ನ್ಯೂಸ್’ ವರದಿ ಮಾಡಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿ ಬಳಿಕ ಮುಂದಿನ ತಿಂಗಳು ಧೋನಿ, ದುಬೈಗೆ ತೆರಳಲಿದ್ದು ತಮ್ಮ ಕ್ರಿಕೆಟ್ ತರಬೇತಿ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕ್ಲಬ್‌ನ ಕಾರ್ಯ ಚಟುವಟಿಕೆಗಳು, ಶಿಬಿರ ಸೇರಿದಂತೆ ಇತರೆ ವಿವರಗಳ ಕುರಿತು ಶೀಘ್ರದಲ್ಲೇ ಪಿಎಸ್‌ಸಿ ಮಾಹಿತಿ ನೀಡಲಿದೆ ಎಂದು ಹೇಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಧೋನಿ, ‘ವಿಶ್ವದ ಮೂಲೆ ಮೂಲೆಗೂ ಕ್ರಿಕೆಟ್ ತಲುಪಬೇಕು. ಇದಕ್ಕೆ ಅಗತ್ಯವಾದ ಸೇವೆ ಸಲ್ಲಿಸಲು ಅವಕಾಶ ಲಭ್ಯವಾಗಿರುವುದು ಸಂತಸ ತಂದಿದೆ’ ಎಂದಿದ್ದಾರೆ.