ಹೊಬಾರ್ಟ್(ನ.11): ಆಸ್ಟ್ರೇಲಿಯಾ ಕ್ರಿಕೆಟ್ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ನಡೆಸಿದ ಬಾಲ್ ಟ್ಯಾಂಪರಿಂಗ್‌ನಿಂದ ಇನ್ನು ಚೇತರಿಸಿಕೊಂಡಿಲ್ಲ. ಇದೀಗ ಆಸ್ಟ್ರೇಲಿಯಾ ಮತ್ತೊಂದು ಚೆಂಡು ವಿರೂಪಗೊಳಿಸಿದ ಪ್ರಕರಣ ನಡೆಸಿತಾ ಅನ್ನೋ ಅನುಮಾನಗಳು ಮೂಡಿದೆ.

ಸೌತ್ಆಫ್ರಿಕಾ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ನಡೆದ ಘಟನೆ ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ಪುಷ್ಠಿ ನೀಡುತ್ತಿದೆ. ಸಾಮಾಜಿ ಜಾಲತಾಣದಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ 43ನೇ ಓವರ್ ಬೌಲಿಂಗ್ ಮಾಡಲು ಬಂದ ಆಸಿಸ್ ಸ್ಪಿನ್ನರ್ ಆಡಮ್ ಜಂಪಾ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

ಜೇಬಿನಲ್ಲಿ ಕೆಲ ಹೊತ್ತು ಕೈಯಿಟ್ಟುಕೊಂಡ ಜಂಪಾ ಬಳಿಕ ಕೈ ತೆಗೆದು ನೇರವಾಗಿ ಬಾಲ್ ಮೇಲೆ ಸವರಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಬಾಲ್ ಟ್ಯಾಂಪರಿಂಗ್ ಎಂದು ವೈರಲ್ ಆಗಿದೆ.

 

 

ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬರುತ್ತಿದ್ದಂತೆ ಇದರ ಸತ್ಯಾಸತ್ಯತೆ ಪರಿಶೀಲಿಸಲಾಗಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕಂಡೀಷನ್‌ನಲ್ಲಿ ಚಳಿ ಇರುವುದರಿಂದ ಮೈದಾನ ನೀರಿನ ತೇವಾಂಶದಿಂದ ಒದ್ದೆಯಾಗಿರುತ್ತೆ. ಈ ವೇಳೆ ಸ್ಪಿನ್ನರ್‌ಗಳು ಬಾಲ್ ಹಾಗೂ ಕೈಯಿಂದ ನೀರಿನ ತೇವಾಂಶ ತೆಗೆಯಲು ಈ ರೀತಿ ಮಾಡುತ್ತಾರೆ.  ಹೀಗಾಗಿ ಆಸ್ಟ್ರೇಲಿಯಾ ತಂಡ ಮತ್ತೊಂದು ಬಾಲ್ ಟ್ಯಾಂಪರಿಂಗ್ ನಡೆಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.