IOA ಚುನಾವಣೆ ನಡೆಯುವವರೆಗೂ ತಾವೇ ಅಧ್ಯಕ್ಷ: ಗಾಳಿ ಸುದ್ದಿಗೆ ತೆರೆ ಎಳೆದ ನರೇಂದ್ರ ಬಾತ್ರಾ

* ನಾನು ಐಒಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದ ನರೇಂದ್ರ ಬಾತ್ರಾ

* ಕೆಲ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿದ್ದು, ಮುಂಬರುವ ಚುನಾವಣೆವರೆಗೂ ನಾನೇ ಅಧ್ಯಕ್ಷ ಎಂದ ಬಾತ್ರಾ

* ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದ ಬಾತ್ರಾ

I have not resigned as president IOA Says Narinder Batra kvn

ನವದೆಹಲಿ(ಮೇ.26) ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷ ಸ್ಥಾನದಿಂದ ನರೇಂದ್ರ ಬಾತ್ರಾ ಅವರನ್ನು ಕೆಳಗಿಳಿಸಲಾಗಿದ್ದು, ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿದ್ದ ಅನಿಲ್‌ ಖನ್ನಾ ಅವರು ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎನ್ನುವ ವರದಿಯು ಸತ್ಯಕ್ಕೆ ದೂರವಾಗಿದ್ದು, ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಗೆ ಹೊಸದಾಗಿ ಚುನಾವಣೆ ನಡೆಯುವವರೆಗೂ ತಾವೇ ಅಧ್ಯಕ್ಷರಾಗಿ ಮುಂದುವರೆಯುವುದಾಗಿ ನರೇಂದ್ರ ಬಾತ್ರಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದ ವಿಚಾರವನ್ನು ಅಲ್ಲಗಳೆದಿದ್ದಾರೆ.

ನಾನು ಇಂದು ಬೆಳಗಿನ (ಮೇ 26, 2022) ಸುದ್ದಿ ಪತ್ರಿಕೆಗಳಲ್ಲಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷ ಸ್ಥಾನದಿಂದ ನರೇಂದ್ರ ಬಾತ್ರಾ (Narinder Batra) ಅವರನ್ನು ಕೆಳಗಿಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ. ಇನ್ನೊಂದು ಪತ್ರಿಕೆಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿದ್ದ ಅನಿಲ್‌ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವರದಿ ಮಾಡಿದೆ. ಮತ್ತೊಂದು ಪತ್ರಿಕೆಯಲ್ಲಿ ಆರ್‌.ಕೆ ಆನಂದ್ ಅಥವಾ ಅನಿಲ್ ಖನ್ನಾ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯು ನಡೆಸುವ ಐಒಎ ಚುನಾವಣೆವರೆಗೂ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದೆಲ್ಲಾ ವರದಿಗಳಾಗಿವೆ. ಆದರೆ ಈ ಎಲ್ಲಾ ವರದಿಗಳು ಸತ್ಯಕ್ಕೆ ದೂರವಾದವುಗಳಾಗಿವೆ. ಗೌರವಾನ್ವಿತ ಡೆಲ್ಲಿ ಹೈ ಕೋರ್ಟ್‌ ಕೂಡಾ ಹೀಗೆ ಹೇಳಿಲ್ಲ ಎಂದು ಬಾತ್ರಾ ಸ್ಪಷ್ಟಪಡಿಸಿದ್ದಾರೆ.

ಮಾನ್ಯ ಹೈಕೋರ್ಟ್‌ ಸೂಚನೆಯಂತೆ ನಾನು, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (International Hockey Federation) ಇಲ್ಲವೇ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ (Indian Olympic Association) ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ. ಆದರೆ ಹೊಸ ಚುನಾವಣೆ ನಡೆಯುವವರೆಗೂ ನಾನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ನನ್ನ ಸೇವೆಯನ್ನು ಮುಂದುವರೆಸಲಿದ್ದೇನೆ ಎಂದು ನರೇಂದ್ರ ಬಾತ್ರಾ ಹೇಳಿದ್ದಾರೆ.

Olympic Values Education Programme ಭಾರತದಾದ್ಯಂತ ಪ್ರಾರಂಭ

ನಾನು ನಿನ್ನೆಯೇ ಹೇಳಿದಂತೆ, ಮುಂಬರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎನ್ನುವುದನ್ನು ನಾನಿಲ್ಲಿ ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇನೆ. ಹಾಗೂ ಚುನಾವಣೆಯ ಬಳಿಕ ನೇಮಕವಾಗುವ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸುತ್ತೇನೆ. ಸದ್ಯ ನಾನು ಭಾರತೀಯ ಒಲಿಂಪಿಕ್ಸ್‌ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಕೆಲವೊಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದು ನರೇಂದ್ರ ಬಾತ್ರಾ ತಿಳಿಸಿದ್ದಾರೆ.

ಬಾತ್ರಾ ಅವರನ್ನು ಹಾಕಿ ಇಂಡಿಯಾದ ಆಜೀವ ಸದಸ್ಯರನ್ನಾಗಿ ಮಾಡಿರುವುದು ಅಮಾನ್ಯ ಎಂದು ಬುಧವಾರ ದೆಹಲಿ ಹೈಕೋರ್ಚ್‌ ತಿಳಿಸಿದೆ. ಅಲ್ಲದೇ ಕ್ರೀಡಾ ನಿಮಯಗಳನ್ನು ಗಾಳಿಗೆ ತೂರಿರುವ ಹಾಕಿ ಇಂಡಿಯಾವನ್ನು ಆಡಳಿತ ಸಮಿತಿಯ ಕಣ್ಗಾವಲಿನಲ್ಲಿಡಲು ನ್ಯಾಯಾಲಯ ಸೂಚಿಸಿದೆ. ಬಾತ್ರಾ 2017ರಲ್ಲಿ ಐಒಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರನ್ನು ಹಾಕಿ ಇಂಡಿಯಾಕ್ಕೆ ಆಜೀವ ಸದಸ್ಯರನ್ನಾಗಿ ನೇಮಕ ಮಾಡಿರುವುದರನ್ನು ಪ್ರಶ್ನಿಸಿ 1975ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಅಸ್ಲಂ ಖಾನ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

Latest Videos
Follow Us:
Download App:
  • android
  • ios