Asianet Suvarna News Asianet Suvarna News

16ರ ಪ್ರಜ್ಞಾನಂದ ಚೆಸ್ಸೇಬಲ್‌ ಮಾಸ್ಟ​ರ್ಸ್‌ ಟೂರ್ನಿ ಫೈನಲ್‌ಗೆ

* ಆನ್‌ಲೈನ್‌ ರಾರ‍ಯಪಿಡ್‌ ಚೆಸ್‌ ಟೂರ್ನಿಯಲ್ಲಿ ಫೈನಲ್‌ನಲ್ಲಿ 16 ವರ್ಷದ ಆರ್‌.ಪ್ರಜ್ಞಾನಂದ

* ಸೆಮೀಸ್‌ನ 4 ಪಂದ್ಯಗಳು 2-2ರಿಂದ ಸಮಬಲಗೊಂಡ ಬಳಿಕ ಟೈ ಬ್ರೇಕರ್‌ ನಲ್ಲಿ ಫಲಿತಾಂಶ

* ಚೀನಾದ ಡಿಂಗ್‌ ಲಿರೇನ್‌ ಅವರನ್ನು ಪ್ರಜ್ಞಾನಂದ ಫೈನಲ್‌ನಲ್ಲಿ ಎದುರಿಸಲಿದ್ದಾರೆ

R Praggnanandhaa makes Chessable Masters final kvn
Author
Bengaluru, First Published May 26, 2022, 11:16 AM IST

ಚೆನ್ನೈ(ಮೇ.26): ಯುವ ಗ್ರ್ಯಾಂಡ್‌ ಮಾಸ್ಟರ್‌, 16 ವರ್ಷದ ಆರ್‌.ಪ್ರಜ್ಞಾನಂದ (R Praggnanandhaa) ಚೆಸ್ಸೇಬಲ್‌ ಮಾಸ್ಟ​ರ್ಸ್‌ ಆನ್‌ಲೈನ್‌ ರಾರ‍ಯಪಿಡ್‌ ಚೆಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಚೆಸ್‌ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬುಧವಾರ ನೆದರ್‌ಲೆಂಡ್ಸ್‌ನ ಅನೀಶ್‌ ಗಿರಿ ವಿರುದ್ಧ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಸೆಮೀಸ್‌ನ 4 ಪಂದ್ಯಗಳು 2-2ರಿಂದ ಸಮಬಲಗೊಂಡ ಬಳಿಕ ಟೈ ಬ್ರೇಕರ್‌ ಮೂಲಕ ಗೆದ್ದು ಪ್ರಜ್ಞಾನಂದ ಫೈನಲ್‌ಗೆ ಲಗ್ಗೆ ಇಟ್ಟರು.

ಮತ್ತೊಂದು ಸೆಮೀಸ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್‌ ಕಾಲ್‌ರ್‍ಸನ್‌ (Magnus Carlsen) ಅವರನ್ನು ಸೋಲಿಸಿದ ಚೀನಾದ ಡಿಂಗ್‌ ಲಿರೇನ್‌ ಅವರನ್ನು ಪ್ರಜ್ಞಾನಂದ ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಸದ್ಯ ವಿಶ್ವ ನಂ.2 ಸ್ಥಾನದಲ್ಲಿರುವ ಲಿರೇನ್‌ ವಿರುದ್ಧ ಪ್ರಜ್ಞಾನಂದಗೆ ಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಪ್ರಜ್ಞಾನಂದ ಇದೇ ಟೂರ್ನಿಯ 6ನೇ ಸುತ್ತಿನಲ್ಲಿ ಕಾಲ್‌ರ್‍ಸನ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು. ಇದಕ್ಕೂ ಮೊದಲು 3 ತಿಂಗಳ ಹಿಂದೆ ಕೂಡಾ ಅವರನ್ನು ಪ್ರಜ್ಞಾನಂದ ಸೋಲಿಸಿ ಈ ಸಾಧನೆ ಮಾಡಿದ 3ನೇ ಭಾರತೀಯ ಎನಿಸಿಕೊಂಡಿದ್ದರು.

ಏಷ್ಯಾಕಪ್‌: ಭಾರೀ ಅಂತರದ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಜಕಾರ್ತ: 1 ಡ್ರಾ, 1 ಸೋಲಿನೊಂದಿಗೆ ಏಷ್ಯಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಸೂಪರ್‌ 4ರ ಹಂತ ಪ್ರವೇಶಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಿರುವ ಹಾಲಿ ಚಾಂಪಿಯನ್‌ ಭಾರತ ನಿರ್ಣಾಯಕ ಪಂದ್ಯದಲ್ಲಿ ಗುರುವಾರ ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿದ್ದು, ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಈ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಅತ್ತ ಜಪಾನ್‌ ವಿರುದ್ಧ ಪಾಕಿಸ್ತಾನ ಭಾರೀ ಅಂತರದಲ್ಲಿ ಸೋತರೆ ಮಾತ್ರ ಭಾರತ ಸೂಪರ್‌ 4ರ ಹಂತ ಪ್ರವೇಶಿಸುವ ಸಾಧ್ಯತೆ ಇದೆ. 

French Open ಟೆನಿಸ್ : ಯುಎಸ್ ಓಪನ್ ಚಾಂಪಿಯನ್ ಎಮ್ಮಾಗೆ ಆಘಾತ

‘ಎ’ ಗುಂಪಿನಲ್ಲಿರುವ ಭಾರತ, ಪಾಕ್‌ ವಿರುದ್ಧ ಮೊದಲ ಪಂದ್ಯದಲ್ಲಿ 1-1ರ ಡ್ರಾಗೆ ತೃಪ್ತಿಪಟ್ಟು, ಬಳಿಕ ಜಪಾನ್‌ ವಿರುದ್ಧ 2-5ರಿಂದ ಸೋತಿತ್ತು. ಸದ್ಯ ಜಪಾನ್‌ 6 ಅಂಕ ಹೊಂದಿದ್ದರೆ, ಪಾಕ್‌ 4 ಅಂಕ ಸಂಪಾದಿಸಿದೆ. ಕೇವಲ 1 ಅಂಕದೊಂದಿಗೆ ಭಾರತ 3ನೇ ಸ್ಥಾನದಲ್ಲಿದ್ದು, ಪಾಕ್‌ ಹಿಂದಿಕ್ಕಲು ಈ ಪಂದ್ಯದಲ್ಲಿ ದೊಡ್ಡ ಗೆಲುವು ಅನಿವಾರ್ಯ.

ಮೇ 28ರಿಂದ ಬೆಂಗಳೂರು ಸಮ್ಮರ್‌ ಮೀಟಿಂಗ್‌ ರೇಸ್‌

ಬೆಂಗಳೂರು: ‘ಬೆಂಗಳೂರು ಸಮ್ಮರ್‌ ಮೀಟಿಂಗ್‌-2022’ ಕುದುರೆ ರೇಸ್‌ ಮೇ 28ರಿಂದ ಆಗಸ್ಟ್‌ 5 ವರೆಗೆ ನಡೆಯಲಿದೆ ಎಂದು ಬೆಂಗಳೂರು ಟಫ್‌ರ್‍ ಕ್ಲಬ್‌ ಮುಖ್ಯಸ್ಥ ಉದಯ್‌ ಈಶ್ವರನ್‌ ಬುಧವಾರ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಮೊದಲು ರೇಸ್‌ ಮೇ 21ಕ್ಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೊದಲ ಎರಡು ದಿನಗಳ ರೇಸ್‌ಗಳನ್ನು ರದ್ದುಗೊಳಿಸಲಾಗಿದೆ ಎಂದರು. ಈ ಬಾರಿ 4 ಕ್ಲಾಸಿಕ್‌ ರೇಸ್‌ಗಳು ಮತ್ತು 15 ಸ್ವೀಪ್‌ಸ್ಟೇಕ್ಸ್‌ ರೇಸ್‌ಗಳು ನಡೆಯಲಿವೆ. ಬೆಂಗಳೂರು ಸಮ್ಮರ್‌ ಡರ್ಬಿ ಜುಲೈ 17ಕ್ಕೆ ನಿಗದಿಯಾಗಿದೆ. ಒಟ್ಟಾರೆ ಸಮ್ಮರ್‌ ಮೀಟಿಂಗ್‌ ರೇಸ್‌ನ ಒಟ್ಟು ಬಹುಮಾನ ಮೊತ್ತ 14.41 ಕೋಟಿ ರು. ಇದೆ. ಕಳೆದ ಬಾರಿಗಿಂತ ಶೇ.21ರಷ್ಟುಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ, ಕೊನೆಯ ದಿನವಾದ ಆ.6ರಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕೂಟದಲ್ಲಿ ಪಾಲ್ಗೊಂಡು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios