Asianet Suvarna News Asianet Suvarna News

ಮೈಕಲ್‌ ಜೋರ್ಡನ್‌ ಶೂ 18 ಕೋಟಿ ರುಪಾಯಿಗೆ ಹರಾ​ಜು!

ಬಾಸ್ಕೆ​ಟ್‌​ಬಾಲ್‌ ದಿಗ್ಗಜ ಮೈಕಲ್‌ ಜೋರ್ಡಾನ್‌ ಅವರ ಶೂ ದಾಖಲೆ ಮೊತ್ತಕ್ಕೆ ಹರಾಜು
1998ರ ಎನ್‌​ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ಶೂ ಸುಮಾರು 18 ಕೋಟಿ ರುಪಾಯಿಗೆ ಹರಾಜು
ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ

Sneakers Worn By Michael Jordan Sell For Record breaking price kvn
Author
First Published Apr 13, 2023, 10:01 AM IST

ನ್ಯೂಯಾರ್ಕ್(ಏ.13): ಬಾಸ್ಕೆ​ಟ್‌​ಬಾಲ್‌ ದಿಗ್ಗಜ ಮೈಕಲ್‌ ಜೋರ್ಡಾನ್‌ 1998ರ ಎನ್‌​ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್‌ ಜೋರ್ಡಾನ್‌ 13’ ಶೂ ಹರಾ​ಜಿ​ನಲ್ಲಿ ದಾಖ​ಲೆಯ 2.2 ಮಿಲಿ​ಯನ್‌ ಡಾಲ​ರ್‌​(​ಸು​ಮಾರು 18 ಕೋಟಿ ರುಪಾಯಿ)ಗೆ ಮಾರಾ​ಟ​ವಾ​ಗಿದೆ. ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎನಿಸಿ​ಕೊಂಡಿದೆ. 

1998ರಲ್ಲಿ ಎನ್‌​ಬಿಎ ಫೈನಲ್‌ ಗೇಮ್‌ 2 ಸರ​ಣಿ​ಯಲ್ಲಿ ಚಿಕಾಗೋ ಬುಲ್ಸ್‌ ಪರ ಜೋರ್ಡಾನ್‌ ಕೊನೆ ಪಂದ್ಯ​ವಾ​ಡಿ​ದ್ದರು. ಆ ಪಂದ್ಯ​ವನ್ನು ಲಾಸ್ಟ್‌ ಡ್ಯಾನ್ಸ್‌ ಎಂದೇ ಕರೆ​ಯ​ಲಾ​ಗು​ತ್ತದೆ. ಈ ಮೊದಲು 2021ರಲ್ಲಿ ಅಮೆ​ರಿ​ಕದ ರಾರ‍ಯಪರ್‌ ಕಾನ್ಯೆ ವೆಸ್ಟ್‌ ಅವ​ರ ಶೂ 1.8 ಮಿಲಿ​ಯನ್‌ ಡಾಲ​ರ್‌ಗೆ ಹರಾ​ಜಾ​ಗಿದ್ದು ದಾಖ​ಲೆ​ಯಾ​ಗಿ​ತ್ತು.

ಭಾರೀ ದಂಡ ಪ್ರಶ್ನಿ​ಸಿ ಬ್ಲಾಸ್ಟರ್ಸ್‌ ಮೇಲ್ಮ​ನ​ವಿ

ನವ​ದೆ​ಹ​ಲಿ: ಬೆಂಗ​ಳೂರು ಎಫ್‌ಸಿ ವಿರು​ದ್ಧ​ದ ಐಎ​ಸ್‌​ಎಲ್‌ ಪ್ಲೇ-ಆಫ್‌ ಪಂದ್ಯ​ದಲ್ಲಿ ಅರ್ಧ​ದ​ಲ್ಲೇ ಮೈದಾನ ತೊರೆ​ದಿದ್ದಕ್ಕೆ 4 ಕೋಟಿ ರು. ದಂಡ ವಿಧಿ​ಸಿ​ರು​ವು​ದನ್ನು ಪ್ರಶ್ನಿಸಿ ಕೇರಳ ಬ್ಲಾಸ್ಟರ್‌ ತಂಡ ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶ​ನ್‌​(​ಎ​ಐ​ಎ​ಫ್‌​ಎ​ಫ್‌)ಗೆ ಮೇಲ್ಮ​ನವಿ ಸಲ್ಲಿ​ಸಿದೆ. ಇತ್ತೀ​ಚೆಗೆ ಎ​ಐ​ಎ​ಫ್‌​ಎ​ಫ್‌ ಶಿಸ್ತು ಸಮಿತಿ ಕೇರ​ಳಕ್ಕೆ 4 ಕೋಟಿ ರುಪಾಯಿ ದಂಡ ವಿಧಿಸಿ ಬಹಿ​ರಂಗ ಕ್ಷಮೆ​ಯಾ​ಚಿ​ಸು​ವಂತೆ ಆದೇ​ಶಿ​ಸಿತ್ತು. 

ಈಗಾ​ಗಲೇ ಈ ಬಗ್ಗೆ ತಂಡ ವಿಷಾದ ವ್ಯಕ್ತ​ಪ​ಡಿ​ಸಿ​ದ್ದರೂ ದಂಡದ ಬಗ್ಗೆ ಮೇಲ್ಮ​ನವಿ ಸಲ್ಲಿ​ಸಿದೆ. ಮಾರ್ಚ್‌ 3ಕ್ಕೆ ಬೆಂಗ​ಳೂ​ರಿನ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ನಡೆದ ಪಂದ್ಯ​ದಲ್ಲಿ ಬಿಎ​ಫ್‌​ಸಿಯ ಸುನಿಲ್‌ ಚೆಟ್ರಿ ಬಾರಿ​ಸಿದ ಫ್ರೀ ಕಿಕ್‌ ಗೋಲ​ನ್ನು ವಿರೋ​ಧಿಸಿ ಕೇರಳ ಆಟ​ಗಾ​ರರು ಅರ್ಧ​ದಲ್ಲೇ ಆಟ ನಿಲ್ಲಿಸಿ ಮೈದಾನ ತೊರೆ​ದಿ​ದ್ದರು.

ಏಷ್ಯನ್‌ ಕುಸ್ತಿ ಕೂಟ: ಅಂತಿಮ್‌ ಫೈನ​ಲ್‌​ಗೆ

ಅಸ್ತಾನ(ಕಜಕಸ್ತಾನ): ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತಕ್ಕೆ ಮತ್ತೊಂದು ಬೆಳ್ಳಿ ಪದಕ ಖಚಿ​ತ​ವಾ​ಗಿದೆ. ಬುಧ​ವಾರ ಮಹಿ​ಳೆ​ಯರ 53 ಕೆ.ಜಿ. ವಿಭಾ​ಗದ ಸ್ಪರ್ಧೆ​ಯಲ್ಲಿ ಅಂತಿಮ್‌ ಪಂಘಾಲ್‌ ಫೈನಲ್‌ ಪ್ರವೇ​ಶಿ​ಸಿ​ದರು. ಕಳೆದ ವರ್ಷ ಅಂಡ​ರ್‌-20 ವಿಶ್ವ ಚಾಂಪಿ​ಯನ್‌ ಆಗಿದ್ದ 18 ವರ್ಷದ ಪಂಘಾಲ್‌ ಸೆಮಿ​ಫೈ​ನ​ಲ್‌​ನಲ್ಲಿ ಉಜ್ಬೇ​ಕಿ​ಸ್ತಾ​ನದ ಆಕ್ಟೆಂಗೆ ವಿರುದ್ಧ 8-1 ಅಂಕ​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ದರು. 

IPL 2023: ಬರೋಬ್ಬರಿ 15 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಮಣಿಸಿದ ರಾಜಸ್ಥಾನ!

ಫೈನ​ಲ್‌​ನಲ್ಲಿ ಅವರು ಜಪಾ​ನ್‌ನ ಅಕಾರಿ ಫುಜಿ​ನಮಿ ವಿರುದ್ಧ ಸೆಣ​ಸಾ​ಡ​ಲಿ​ದ್ದಾರೆ. ಇದೇ ವೇಳೆ 57 ಕೆ.ಜಿ. ವಿಭಾ​ಗ​ದಲ್ಲಿ ಅನ್ಶು ಮಲಿಕ್‌, 65 ಕೆ.ಜಿ. ಸ್ಪರ್ಧೆ​ಯಲ್ಲಿ ಮನಿಶಾ, 72 ಕೆ.ಜಿ. ವಿಭಾ​ಗ​ದಲ್ಲಿ ರಿತಿಕಾ ಕಂಚಿನ ಪದ​ಕದ ಪಂದ್ಯ​ದಲ್ಲಿ ಆಡ​ಲಿ​ದ್ದಾರೆ. ಈವ​ರೆಗೆ ಭಾರತ ಟೂರ್ನಿ​ಯಲ್ಲಿ 6 ಪದ​ಕ​ಗ​ಳನ್ನು ಬಾಚಿ​ಕೊಂಡಿ​ದೆ.

ಮಹಿ​ಳಾ ಟೆನಿಸ್‌: ಸತತ 2ನೇ ಪಂದ್ಯ ಗೆದ್ದ ಭಾರ​ತ

ತಾಷ್ಕೆಂಟ್‌(ಉಜ್ಬೇಕಿಸ್ತಾನ): ವಿಶ್ವ ಮಹಿಳಾ ತಂಡಗಳ ಟೆನಿಸ್‌ ಚಾಂಪಿಯನ್‌ಶಿಪ್‌(ಬಿಲ್ಲಿ ಜೀನ್‌ ಕಿಂಗ್‌ ಕಪ್‌)ನ ಏಷ್ಯಾ-ಓಷಿಯಾನಿಯಾ ಗುಂಪು-1ರಲ್ಲಿ ಭಾರತ ಸತತ 2ನೇ ಗೆಲುವು ದಾಖ​ಲಿ​ಸಿದೆ. ಮೊದಲ ಪಂದ್ಯ​ದ​ಲ್ಲಿ ಥಾಯ್ಲೆಂಡ್‌ ವಿರುದ್ಧ 2-1 ಜಯ​ಗ​ಳಿ​ಸಿದ್ದ ಭಾರತ ಬುಧ​ವಾರ ಉಜ್ಬೇ​ಕಿ​ಸ್ತಾನ ವಿರುದ್ಧ 3-0 ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು. 

ಮೊದಲ ಸಿಂಗ​ಲ್ಸ್‌​ನಲ್ಲಿ ಋುತುಜಾ ಬೋಸಲೆ, ಸಬ್ರೀನಾ ವಿರುದ್ಧ ಗೆದ್ದರೆ, 2ನೇ ಸಿಂಗಲ್ಸ್‌ ಪಂದ್ಯ​ದಲ್ಲಿ ಅಂಕಿತಾ ರಾಣಾ ಅವರು ಸೆವಿಲ್‌ರನ್ನು ಸೋಲಿ​ಸಿ​ದರು. ಬಳಿಕ ನಡೆದ ಡಬಲ್ಸ್‌ ಪಂದ್ಯ​ದಲ್ಲಿ ಶ್ರೀವಳ್ಳಿ ರಶ್ಮಿ​ಕಾ-ವೈದೇಹಿ ಚೌಧರಿ ಗೆಲುವು ಸಾಧಿ​ಸಿ​ದರು. ಭಾರತ ಸದ್ಯ ಅಂಕ​ಪ​ಟ್ಟಿ​ಯಲ್ಲಿ 2ನೇ ಸ್ಥಾನ​ದ​ಲ್ಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆವ ತಂಡಗಳು ವಿಶ್ವ ಗುಂಪು ಪ್ಲೇ-ಆಫ್‌್ಸಗೆ ಪ್ರವೇಶಿಸಲಿವೆ.

Follow Us:
Download App:
  • android
  • ios