ನವದೆಹಲಿ(ಸೆ.27): ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್​ ಬ್ಯಾಶ್​ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಆಡಲಿದ್ದಾರೆ.

ಬಿಗ್​ಬ್ಯಾಶ್​ ಟೂರ್ನಿಯಲ್ಲಿ ಬ್ರಿಸ್ಬೇನ್​ ಹೀಟ್​ ಪರ ಆಡಲು ಸ್ಮೃತಿ ಒಪ್ಪಂದ ಮಾಡಿಕೊಂಡಿದ್ದಾರೆ.  ಒಂದು ವರ್ಷದ ಒಪ್ಪಂದ ಇದಾಗಿದ್ದು, ಬಿಗ್​ಬ್ಯಾಶ್​ನಲ್ಲಿ ಆಡುತ್ತಿರುವ ಎರಡನೇ ಆಟಗಾರ್ತಿಯೆಂಬ ಹಿರಿಮೆ ಎಡಗೈ ವೇಗಿ ಸ್ಮೃತಿ ಮಂದಾನ ಅವರಿಗೆ ಸಲ್ಲುತ್ತದೆ.

ಬಿಗ್​ಬ್ಯಾಶ್​ನ್ಲಲಿ ಮೊಟ್ಟಮೊದಲು ಒಪ್ಪಂದ ಮಾಡಿಕೊಂಡ ಹಿರಿಮೆ ಭಾರತದ ವನಿತೆ ತಂಡದ ಆಟಗಾರ್ತಿ ಹರ್ಮನ್​ಪ್ರೀತ್​ ಕೌರ್​ಗೆ ಸಲ್ಲುತ್ತದೆ.

ಮಂದಾನ ಅಂತರಾಷ್ಟ್ರೀಯ ಕ್ರಿಕೆಟ್'ಗೆ 2014ರಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಷ್ಟೇ ಅಲ್ಲದೆ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟಿ20 ಸರಣಿಯಲ್ಲೂ ಮಂದಾನ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.