Asianet Suvarna News Asianet Suvarna News

4 ದಿನಗಳ ಟೆಸ್ಟ್'ಗೆ ನೋ ಎಂದ ವಾರ್ನರ್, ಸ್ಮಿತ್

ಇತ್ತೀಚೆಗಷ್ಟೇ ಆಕ್ಲೆಂಡ್‌'ನಲ್ಲಿ ನಡೆದ ಸಭೆಯಲ್ಲಿ ಐಸಿಸಿ, 4 ದಿನಗಳ ಟೆಸ್ಟ್ ಪಂದ್ಯಗಳನ್ನು ಪ್ರಾಯೋಗಿಕವಾಗಿ ನಡೆಸಲು ಹಸಿರು ನಿಶಾನೆ ತೋರಿತ್ತು.

Smith Warner say no to 4 day Tests

ಸಿಡ್ನಿ(ಅ.26): ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಆರಂಭಿಕ ಡೇವಿಡ್ ವಾರ್ನರ್ 4 ದಿನಗಳ ಟೆಸ್ಟ್ ಪಂದ್ಯವನ್ನು ಆಡಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಇಬ್ಬರು ತಾರಾ ಆಟಗಾರರ ಹೇಳಿಕೆ, ಐಸಿಸಿಗೆ ಮುಜುಗರ ಉಂಟು ಮಾಡಿದೆ. ವೈಯುಕ್ತಿಕವಾಗಿ ಹೇಳಬೇಕೆಂದರೆ ನನಗೆ 5 ದಿನಗಳ ಪಂದ್ಯವೇ ಒಳ್ಳೆಯದು ಎನಿಸುತ್ತದೆ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಆಕ್ಲೆಂಡ್‌'ನಲ್ಲಿ ನಡೆದ ಸಭೆಯಲ್ಲಿ ಐಸಿಸಿ, 4 ದಿನಗಳ ಟೆಸ್ಟ್ ಪಂದ್ಯಗಳನ್ನು ಪ್ರಾಯೋಗಿಕವಾಗಿ ನಡೆಸಲು ಹಸಿರು ನಿಶಾನೆ ತೋರಿತ್ತು. ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಸಹ 4 ದಿನಗಳ ಪಂದ್ಯಗಳಿಗೆ ವಿರೋಧ ವ್ಯಕ್ತಪಡಿಸಿದ್ದರು.

ಇದೇ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಮೊದಲ 4 ದಿನಗಳ ಟೆಸ್ಟ್ ಆಡಲಿವೆ.

Follow Us:
Download App:
  • android
  • ios