ಬೌಲಿಂಗ್ ಪಟ್ಟಿಯಲ್ಲಿ ಜೇಮ್ಸ್ ಆ್ಯಂಡರ್'ಸನ್ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದರೆ, ಕಗಿಸೋ ರಬಾಡ, ರವೀಂದ್ರ ಜಡೇಜಾ, ಅಶ್ವಿನ್ ಹಾಗೂ ಜೋಸ್ ಹ್ಯಾಜಲ್'ವುಡ್ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ದುಬೈ(ಡಿ.19): ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ವೃತ್ತಿಜೀವನದ ಅದ್ಭುತ ಫಾರ್ಮ್'ನಲ್ಲಿರುವ ಸ್ಮಿತ್ 945 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು, ಕ್ರಿಕೆಟ್ ದಂತಕಥೆ ಡಾನ್. ಬ್ರಾಡ್'ಮನ್ ದಾಖಲೆ ಮುರಿಯಲು ಇನ್ನು ಕೇವಲ 16 ಅಂಕಗಳು ಬಾಕಿಯಿದೆ. ಡಾನ್ ಬ್ರಾಡ್'ಮನ್ ಟೆಸ್ಟ್ ಕ್ರಿಕೆಟ್'ನಲ್ಲಿ 961 ಅಂಕ ಕಲೆಹಾಕಿದ್ದು ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರೆ, ಒಂದು ಸ್ಥಾನ ಏರಿಕೆ ಕಂಡಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಕೇನ್ ವಿಲಿಯಮ್ಸನ್ 4 ಹಾಗೂ ಜೋ ರೋಟ್ 5ನೇ ಸ್ಥಾನದಲ್ಲಿದ್ದಾರೆ.

ಇನ್ನು ಬೌಲಿಂಗ್ ಪಟ್ಟಿಯಲ್ಲಿ ಜೇಮ್ಸ್ ಆ್ಯಂಡರ್'ಸನ್ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದರೆ, ಕಗಿಸೋ ರಬಾಡ, ರವೀಂದ್ರ ಜಡೇಜಾ, ಅಶ್ವಿನ್ ಹಾಗೂ ಜೋಸ್ ಹ್ಯಾಜಲ್'ವುಡ್ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.