'ಯಾವುದೇ ಒಂದು ಕೆಲಸವನ್ನು ಶ್ರದ್ದೆಯಿಂದ ಮಾಡಿದ್ರೆ ಯಶಸ್ಸು ಖಂಡಿತ ಸಿಗುತ್ತೆ. ಆದರೆ ನಾವು ಯಾವುದೇ ಒಂದು ಕೆಲಸವನ್ನು ಉದ್ಯಮವಾಗಿ ಪರಿವರ್ತಿಸಲು ಸ್ವಲ್ಪ ತಾಳ್ಮೆಬೇಕು. ಜನರ ವಿಶ್ವಾಸ ಗೆದ್ದಂತೆ ನಾವು ಜನರ ಮನಸ್ಸಲ್ಲಿ ಉಳಿಯುತ್ತೇವೆ ಆಗಮಾತ್ರ ಯಶಸ್ಸು ಸಾಧ್ಯ'.
ನವೀನ್ ಕೊಡಸೆ
ಅವರೆಂದಿಗೂ ಅಂದುಕೊಂಡಿರಲಿಲ್ಲ, ಕರ್ನಾಟಕ ಕಾರ್ಪೋರೇಟ್ ಕ್ರಿಕೆಟ್ ಲೀಗ್ನ ಕಿಂಗ್ ಅಗಿ ಬೆಳೆಯುತ್ತಾರೆಂದು. ಹೌದು ಸುಮ್ಮನೆ ಜನರ ಮನರಂಜನೆಗಾಗಿ ಆರಂಭಿಸಿದ ಕ್ರಿಕೆಟ್ ಟೂರ್ನಿ ಇಂದು ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಲೀಗ್ ಆಗಿ ಪರಿವರ್ತನೆಯಾಗಿದೆ. ಅಂದು ಸುಮ್ಮನೆ ಆರಂಭಿಸಿದ ಲೀಗ್ ಇಂದು ಎಸ್.ಕೆ ವೆಂಕಟೇಶ್ ಅವರ ಜೀವನವಾಗಿ ಬದಲಾಗಿದೆ.
24/7 ಕ್ರಿಕೆಟ್ ಬಗ್ಗೆ ಯೋಚಿಸುವ ವ್ಯಕ್ತಿ ಎಸ್.ಕೆ ವೆಂಕಟೇಶ್. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಇವರು ‘ಟೈ ವೆಂಕಟೇಶ್’ ಎಂತಾನೇ ಗುರುತಿಸಿಕೊಂಡಿದ್ದಾರೆ. ಸದಾ ಕೋಟ್, ಟೈ ಹಾಕಿಕೊಂಡು ಸುತ್ತಾಡುವ ವೆಂಕಟೇಶ್ ದೇಶದಲ್ಲಿ ಮೊದಲ ಟಿ20 ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ಆರಂಭಿಸಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
1997ರಲ್ಲಿ ಸಿಲಿಕಾನ್ ನಗರಿ ಹೊಸತನಕ್ಕೆ ತೆರೆದುಕೊಳ್ಳುತ್ತಿದ್ದ ಕಾಲವದು. ಈ ವೇಳೆಗಾಗಲೇ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೋರೇಟ್ ಕಂಪನಿಗಳು ಬರಲಾರಂಭಿಸಿದ್ದವು. ಆಗ ಇಲ್ಲಿನ ಜನರಿಗೆ ಕಾರ್ಪೋರೇಟ್ ಕಲ್ಚರ್ ಎಂದರೆ ಏನು ಎನ್ನುವುದೇ ಗೊತ್ತಿರಲಿಲ್ಲ. "ಆಗ ಪೇಪರ್ನಲ್ಲಿ ನಾನು ಓದುತ್ತಾ ತಿಳಿಯಿತು. ಕಾರ್ಪೋರೇಟ್ ಉದ್ಯಮಿಗಳು ಸಖತ್ ಕಷ್ಟಪಡುತ್ತಾರೆ. ಹಾಗೇ ಲಕ್ಷ-ಲಕ್ಷದಲ್ಲಿ ಸಂಬಳ ತೆಗೆದುಕೊಳ್ಳುವ ಇವರು ಪಡುವ ಶ್ರಮ ಕೂಡ ಅಷ್ಟೇ ಇದೆಯೆಂದು. ಎಲ್ಲರಿಗೂ ಕಾರ್ಪೋರೇಟ್ ಕೆಲಸ ಎಂದರೆ ಆರಾಮದ ಕೆಲಸ, ವಾರಕ್ಕೆ ಎರಡು ದಿನ ರಜೆಯನ್ನು ಎಂಜಾಯ್ ಮಾಡುವ ಕೆಲಸ ಎಂದುಕೊಳ್ಳುತ್ತಿದ್ರು. ಆದರೆ ಅವರಿಗೆ ವಾರದ ಆ ಎರಡು ದಿನ ಹೇಗೆ ಕಳೆಯಬೇಕು ಎಂಬುದರ ಬಗ್ಗೆ ಅರಿವಿರಲಿಲ್ಲ. ಅಂತಹ ಸಮಯದಲ್ಲಿ ಈ ಆಟಗಾರರಿಗೆ ಸ್ವಲ್ಪ ಮನರಂಜನೆ ನೀಡಬೇಕು. ಅವರಿಗಾಗಿ ಕ್ರಿಕೆಟ್ ಟೂರ್ನಿ ಆಯೋಜಿಸಬೇಕು ಎಂಬ ಕಾರಣಕ್ಕೆ ನಾನು, ಬ್ರಿಜೇಶ್ ಪಟೇಲ್, ಹಾಗೂ ಕೋಲ್ಕತ್ತದಿಂದ ಬಂದಿದ್ದ ಅಲೋಕ್ ಬಿಶ್ವಾಸ್ ಒಂದು ಪ್ಲಾನ್ ಮಾಡಿದೆವು" ಎನ್ನುತ್ತಾರೆ ವೆಂಕಟೇಶ್.
ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಹಲವಾರು ಟೆಕ್ಕಿಗಳು ಆಗಾಗ ಹಲವು ಕ್ಲಬ್'ಗಳಲ್ಲಿ ಬಂದು ಪ್ರಾಕ್ಟೀಸ್ ಮಾಡುತ್ತಿದ್ರು. ಮತ್ತೊಂದಿಷ್ಟು ಜನರು ವಿದ್ಯಾರ್ಥಿಗಳಾಗಿದ್ದಾಗ ಲೆದರ್ ಕ್ರಿಕೆಟ್ ಆಡಿದವರಾಗಿದ್ರು. ಆದರೆ ಅವರಿಗೆ ಅಲ್ಲಿ ಅಂತಹ ಅವಕಾಶ ಇರಲಿಲ್ಲ. ವಿಪ್ರೋ, ಇನ್ಫೋಸಿಸ್, ಐಬಿಎಮ್, ಮೈಕ್ರೋಸಾಫ್ಟ್, ಸಿಸ್ಕೋನಂತಹ ಹತ್ತು ಹಲವಾರು ಕಂಪನಿಗಳ ಟೆಕ್ಕಿಗಳು ಮತ್ತೆ ಕ್ರಿಕೆಟ್ ಆಡಬೇಕೆಂಬ ತುಡಿತ ವ್ಯಕ್ತಪಡಿಸುತ್ತಿದ್ರು. ಆದರೆ ಅವರಿಗೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಕಾರ್ಪೋರೇಟ್ ಕಂಪನಿಗಳಿಗಾಗಿ ಒಂದು ವ್ಯವವಸ್ಥಿತವಾದ ರೀತಿಯಲ್ಲಿ ಟೂರ್ನಿ ಆಯೋಜಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಟೆಕ್ಕಿಗಳ ತುಡಿತವನ್ನು ಮನಗಂಡ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಇಂತಹ ಒಂದು ನಿರ್ಧಾರ ತೆಗೆದುಕೊಂಡು. ಎಸ್.ಕೆ ವೆಂಕಟೇಶ್ ಒಂದು ಟೂರ್ನಿ ಆಯೋಜಿಸುವ ಮಹತ್ತರ ಜವಾಬ್ದಾರಿ ನೀಡಿದ್ರು.
"ಒಂದುಟೂರ್ನಿಆಯೋಜಿಸಬೇಕೆಂದು ನಿರ್ಧರಿಸಿದ ಮೇಲೆ ನಮಗೆನಿಜವಾದಸಮಸ್ಯೆಎದುರಾಯ್ತು. ಯಾವಮೈದಾನದಲ್ಲಿಆಡಿಸಬೇಕು..? ಯಾವಾಗಟೂರ್ನಿನಡೆಸಬೇಕು..? ಅಂಪೈರ್ಸಹಸಿಬ್ಬಂಧಿಯಾರಾಗಿರಬೇಕು. ಇಂತಹಒಂದುಟೂರ್ನಿಗೆಪ್ರಾಯೋಜಕರನ್ನುಹುಡುಕುವುದೂಒಂದುಸಮಸ್ಯೆಯಕೆಲಸವಾಗಿತ್ತು. ಆಗವೆಂಕಟೇಶ್ಅವರನೆರವಿಗೆಬಂದವರುಕಿಂಗ್ಫಿಶರ್. ಟೂರ್ನಿಯಭಾಗಶಃಪ್ರಾಯೋಜಕತ್ವವನ್ನುಕಿಂಗ್ಫಿಶರ್ ವಹಿಸಿಕೊಂಡ್ರು. ಮೊದಲಿಗೆಸೆಂಟ್ರಲ್ಕಾಲೇಜುಮೈದಾನದಲ್ಲಿಕ್ರಿಕೆಟ್ಆಡಿಸಲುನಿರ್ಧರಿಸಿದ್ದೆವು. ಪ್ರತೀಶನಿವಾರ-ಭಾನುವಾರಕ್ರಿಕೆಟ್ಆಡಿಸಲುನಿರ್ಧರಿಸಲಾಯ್ತು. ಆಗಲ್ಯಾಂಡ್ಲೈನ್ಮತ್ತುಪೇಜರ್ಗಳಲ್ಲಿಸಂದೇಶಕಳಿಸುವಮೂಲಕಎಲ್ಲತಂಡದನಾಯಕರನ್ನುಸಂಪರ್ಕಿಸಲಾಗುತ್ತಿತ್ತು. ಎಲ್ಲತಂಡದನಾಯಕರುಗಳನ್ನುಒಂದೆಡೆಕರೆದುಅವರಿಗೆವೇಳಾಪಟ್ಟಿಯನ್ನುತಿಳಿಸಲಾಯ್ತು. ಆಯಾತಂಡಗಳಅನುಕೂಲಕ್ಕೆತಕ್ಕಂತೆಪಂದ್ಯಗಳನ್ನುಹಿಂದೆಮುಂದೆಮಾಡಿಟಿ20 ಮಾದರಿಯಲ್ಲಿಆಡಿಸುವನಿರ್ಧಾರವನ್ನುನಾವುತೆಗೆದುಕೊಂಡೆವು".
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತ ಅಂಪೈರ್ಗಳು ಮತ್ತು ಸ್ಕೋರರ್ಗಳು ಹಾಗೂ ಪಿಚ್ ಕ್ಯೂರೇಟರ್ಗಳನ್ನು ಈ ಟೂರ್ನಿಯಲ್ಲಿ ಬಳಸಲಾಯ್ತು. ಮೊದಲ ವರ್ಷ ಟೂರ್ನಿ ಯಶಸ್ವಿಯಾಯ್ತು. ಟೂರ್ನಿಯ ರೂಪುರೇಷೆ ರೂಪಿಸಿದ್ದು, ಮಾಜಿ ಕ್ರಿಕೆಟಿಗ ಬ್ರೀಜೇಶ್ ಪಟೇಲ್, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮುಖ್ಯಸ್ಥ ಅಲೋಕ್ ಬಿಶ್ವಾಸ್. ಆದರೆ ಎಲ್ಲರೊಂದಿಗೆ ಸಂಪರ್ಕ ಸಾಧಿಸಿ. ಎಲ್ಲ ವ್ಯವಸ್ಥೆ ಕಲ್ಪಿಸಿದ್ದು, ಟೂರ್ನಿ ಆಯೋಜಿಸಿದ ಕೀರ್ತಿ ವೆಂಕಟೇಶ್ಗೆ ಸಲ್ಲುತ್ತದೆ.
ಮೊದಲ ವರ್ಷದ ಯಶಸ್ಸಿನ ನಂತರ ಎಲ್ಲ ಕಾರ್ಪೋರೇಟ್ ಕಂಪನಿಗಳು ಎರಡನೇ ವರ್ಷ ಟೂರ್ನಿ ನಡೆಸುವಂತೆ ವೆಂಕಟೇಶ್ ಅವರ ಮೇಲೆ ಒತ್ತಡ ಹೇರಲು ಆರಂಭಿಸಿದ್ರು. ಆದರೆ ಬ್ರಿಜೇಶ್ ಪಟೇಲ್ ತಮ್ಮ ಹೆಚ್ಚಿನ ಕೆಲಸದಿಂದಾಗಿ ಇತ್ತ ಹೆಚ್ಚು ಗಮನ ಹರಿಸಲಿಲ್ಲ. ಮೊದಲ ಟೂರ್ನಿ ಮಾಡಿದ ಅನುಭವವಿದ್ದ ವೆಂಕಟೇಶ್ ತಾವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಟೂರ್ನಿ ಆಯೋಜಿಸಿದ್ರು. ಎರಡನೇ ಆವೃತ್ತಿಯು ಸಂಪೂರ್ಣ ಯಶಸ್ವಿಯಾಯ್ತು.
ಆನಂತರ ಟೂರ್ನಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಕೊಳ್ಳುತ್ತಾ ಸಾಗಿತು. 20-30 ತಂಡಗಳಿಂದ 50 ತಂಡಗಳು ಭಾಗವಹಿಸಲು ಮುಂದಾದವು. ಜೊತೆಗೆ ಟೂರ್ನಿ 2-3 ತಿಂಗಳುಗಳ ಕಾಲ ನಡೆಯುವಂತಾಯ್ತು. ಆಗಾಗ ಆಟಗಾರರಿಗೆ ದೇಶದ ಪ್ರತಿಷ್ಠಿತ ಕ್ರಿಕೆಟಿಗರನ್ನು ಭೇಟಿ ಮಾಡಿಸುವಂತಹ ಪ್ರಯತ್ನಗಳೂ ಮಾಡಲಾಯ್ತು. ಟೂರ್ನಿ ಉದ್ಘಾಟನೆಗೆ ಮತ್ತು ಟ್ರೋಫಿ ನೀಡುವ ವೇಳೆ ದೇಶದ ಪ್ರತಿಷ್ಠಿತ ಕ್ರಿಕೆಟರ್ಗಳಿಂದ ಕೊಡಿಸುವಂತಹ ಕೆಲಸ ಕೂಡ ಇಲ್ಲಿ ನಡೆಯಿತು.
"ಈಕಾರ್ಪೋರೇಟ್ಕ್ರಿಕೆಟ್ಟೂರ್ನಿಯಿಂದಕೇವಲನಾವುಗಳುಮಾತ್ರಬದುಕುಕಟ್ಟಿಕೊಳ್ಳಲಿಲ್ಲ. ಅನೇಕಕ್ರಿಕೆಟ್ಕ್ಲಬ್ಗಳುಇದರಲಾಭಪಡೆದವು. ವರ್ಷಪೂರ್ತಿಕಾರ್ಪೋರೇಟ್ಕಂಪನಿಗಳಆಟಗಾರರಿಗೆಅಭ್ಯಾಸನಡೆಸಲುಅವರುಹೇಳಿದಸ್ಥಳದಲ್ಲೇಅವರಿಗೆತಿಂಗಳಿಗೆಇಂತಿಷ್ಟುಹಣಪಡೆದು, ನೆಟ್'ಪ್ರಾಕ್ಟೀಸ್ನಡೆಸಲುಅನುಮತಿನೀಡಲಾಯ್ತು. ಇದರಿಂದಅದೆಷ್ಟೋಕ್ಲಬ್ಗಳುಲಾಭದಲ್ಲಿನಡೆಯುತ್ತಿವೆ. ಜೊತೆಗೆಮೂರುತಿಂಗಳುಗಳಕಾಲ, ವಿಕೇಂಡ್ನಲ್ಲಿಮೂರುಮೈದಾನದಲ್ಲಿಕ್ರಿಕೆಟ್ನಡೆಯುವುದರಿಂದಅನೇಕಅಂಪೈರ್ಗಳುಮತ್ತುಸ್ಕೋರರ್ಮತ್ತುಗ್ರೌಂಡ್ಮೆನ್ಸ್ಗಳಿಗೆಉದ್ಯೋಗದೊರೆತಿದೆ. ಟೂರ್ನಿಆಯೋಜನೆಗೆನಾನೇಮುಂದಾಗಿನಿಂತ. ಎಲ್ಲವನ್ನುಸುಗಮವಾಗಿಆಯೋಜಿಸಿಕೊಟ್ಟಿದ್ದೇನೆ. ಇದುವರೆಗೂಒಂದುಸಾವಿರಕ್ಕಿಂತಹೆಚ್ಚುಕ್ರಿಕೆಟ್ಟೂರ್ನಿಆಯೋಜಿಸಿದಅನುಭವನನಗಿದೆ," ಅಂತಾರೆವೆಂಕಟೇಶ್.
ದೇಶದಮೊದಲಕಾರ್ಪೋರೇಟ್ಕ್ರಿಕೆಟ್ಟೂರ್ನಿಸ್ಟಾರ್ಕಿಂಗ್ಫಿಶರ್ಟಿ20 ಟೂರ್ನಿ:
ಕಳೆದ 20 ವರ್ಷದಿಂದ ಹಲವು ಕಾರ್ಪೋರೇಟ್ ಕಂಪನಿಗಳಿಗೆ ವೇದಿಕೆ ಒದಗಿಸಿರುವ ಈ ಟೂರ್ನಿ, ಹಲವು ಪ್ರತಿಭೆಗಳಿಗೆ ಪ್ರಮುಖ ವೇದಿಕೆಯಾಗಿದೆ. ಸ್ಟಾರ್ ಕಿಂಗಫಿಶರ್ ಟಿ20 ಟೂರ್ನಿ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಟೂರ್ನಿ ಇದಾಗಿದ್ದು, ಹಲವು ಪ್ರತಿಭೆಗಳು ಇದರಿಂದ ಹೊರಬಂದಿವೆ. ಕೆಪಿಎಲ್ನಲ್ಲಿ ಆಡುತ್ತಿರುವ ಅನೇಕ ಪ್ರತಿಭೆಗಳು ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿರುವ ಅನೇಕ ಕ್ರಿಕೆಟಿಗರು ಇಲ್ಲಿ ಮಿಂಚಿ ಅಲ್ಲಿ ಹೋಗಿರುವುದು ಮತ್ತೊಂದು ವಿಶೇಷ.
ವೆಂಕಟೇಶ್ ಕೀರ್ತಿ ಎಲ್ಲಿಯವರೆಗೆ ಹಬ್ಬಿದೆಯೆಂದರೆ, ಇಲ್ಲಿ ಕ್ರಿಕೆಟ್ ಆಡಿರುವ ಅನೇಕ ಟೆಕ್ಕಿಗಳು, ವಿದೇಶಗಳಲ್ಲಿ ನೆಲೆಸಿದ್ದಾರೆ. ಅಲ್ಲಿ ನಡೆಯುವ ಟೂರ್ನಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಈ ಎಲ್ಲಾ ಯಶಸ್ಸಿಗೆ ವೆಂಕಟೇಶ್ ಕಾರಣವೆಂದು ಅವರು ಹೇಳುತ್ತಾರೆ. ಇಂತಹವೊಂದು ಅದ್ಭುತ ಸಾಧನೆ ಮಾಡಿದ ಇವರಿಗೆ ಟೀಮ್ ಇಂಡಿಯಾದ ಹಾಲಿ ಮಾಜಿ ಆಟಗಾರರಿಂದ ಹಿಡಿದು ಅನೇಕ ವಿದೇಶಿ ಕ್ರಿಕೆಟಿಗರು, ವೆಂಕಟೇಶ್ ಅವರ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.
"ಬೆಂಗಳೂರಿನಲ್ಲಿ ಕಾರ್ಪೋರೇಟ್ ವಲಯ ಚೆನ್ನಾಗಿ ಬೆಳೆದಿದೆ. ದೇಶದ ಬೇರೆ ಯಾವ ರಾಜ್ಯಗಳಿಗೆ ಹೋಲಿಸಿದ್ರೂ ಬೆಂಗಳೂರು ಕಾರ್ಪೋರೇಟ್ ಕಂಪನಿಗಳ ಸ್ವರ್ಗ. ಹಾಗಾಗಿ ಇಲ್ಲಿ ಏನ್ ಮಾಡಿದ್ರು ಹಣ ಸಂಪಾದಿಸಬಹುದು. ಆದರೆ ಅದು ವ್ಯವಸ್ಥಿವಾಗಿ ಕಾರ್ಪೋರೇಟ್ ವಲಯವನ್ನು ಸೆಳೆಯುವಂತಿರಬೇಕು. ಕ್ರಿಕೆಟ್ ಮಾತ್ರವಲ್ಲ, ಬೇರೆ ಕ್ರೀಡೆಗಳನ್ನು ಕಾರ್ಪೋರೇಟ್ ಉದ್ಯಮಿಗಳನ್ನು ಸೆಳೆಯುವಂತೆ ಆಯೋಜಿಸಿದ್ರೆ ನಾವು ಬದುಕಬಹುದು, ಇದರಿಂದ ಹಲವರಿಗೆ ಉದ್ಯೋಗ ಒದಗಿಸಬಹುದು. ಇದೊಂದು ಉದ್ಯಮವಾಗಿ ಮಾಡಿಕೊಂಡರೆ, ಟೆಕ್ಕಿಗಳಿಗೆ ವಿಕೇಂಡ್ ಮಜಾ ನೀಡುವುದರ ಜೊತೆಗೆ ಸ್ವಲ್ಪ ಹಣ ಕೂಡ ಗಳಿಸಬಹುದು. ನಿಮ್ಮ ಟೂರ್ನಿ ಚೆನ್ನಾಗಿ ನಡೆದಲ್ಲಿ ಹಲವು ಜಾಹೀರಾತುದಾರರು, ತಾವಾಗೇ ನಿಮ್ಮನ್ನು ಹುಡುಕಿಕೊಂಡು ಬರ್ತಾರೆ. ಆದರೆ ಹಣವೊಂದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮಾಡುವುದು ಬಿಟ್ಟು. ಉತ್ತಮ ಸೇವೆ ಒದಗಿಸಿದಲ್ಲಿ ಹಣ ನಿಮ್ಮನೇ ಹುಡುಕಿಕೊಂಡು ಬರಲಿದೆ ಅಂತಾ ಮಾತು ಮುಗಿಸುತ್ತಾರೆ ಎಸ್.ಕೆ ವೆಂಕಟೇಶ್.
