ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಮನಗೆ ಮೋಸ್ಟ್ ವಾಂಟೆಡ್  ಕಳ್ಳರು ನುಗ್ಗಿದ ಘಟನೆ ನಡೆದಿದೆ. ದೀಪಕ್ ಚಹಾರ್ ತಾಯಿ ಮಾತ್ರ ಮನೆಯಲ್ಲಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿದ್ದಾರೆ. ಆದರೆ ಮುಂದೇನಾಯ್ತು? ಇಲ್ಲಿದೆ. 

ಉತ್ತರ ಪ್ರದೇಶ(ಅ.17): ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಮನೆಗೆ ನುಗ್ಗಿದ 6 ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ದೀಪಕ್ ಚಹಾರ್ ತಾಯಿ ಮಾತ್ರ ಮನೆಯಲ್ಲಿರುವ 6 ಮಂದಿ ಕಳ್ಳರು ಮನಗೆ ಕನ್ನ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲೇ ಪ್ಲಾನ್ ಮಾಡಿದ ಕಳ್ಳರು ಕ್ರಿಕೆಟಿಗನ ಮನಗೆ ನುಗ್ಗೋ ಮೊದಲು ಯಾರಿಗೂ ತಿಳಿಯದಂತೆ ಸಿಸಿಟಿವಿ ಕೇಬಲ್ ಕಟ್ ಮಾಡಿದ್ದಾರೆ. ಅಷ್ಟರಲ್ಲೇ ಮನೆಯಲ್ಲಿದ್ದ ದೀಪಕ್ ಚಹಾರ್ ತಾಯಿಗೆ ಅನುಮಾನ ಬಂದಿದೆ. ಹೀಗಾಗಿ ತಕ್ಷಣವೇ ಅಲರಾಮ್ ಬೆಲ್ ಒತ್ತಿದ್ದಾರೆ.

ಅಲರಾಂ ಶಬ್ದದಿಂದ ಎಚ್ಚೆತ್ತ ಕಳ್ಳರು ಅಲ್ಲಿಂದ ಪಲಾಯನ ಮಾಡಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಪೊಲೀಸರು ಕಳ್ಳರನ್ನ ಹಿಡಿದಿದ್ದಾರೆ. ಈ 6 ಮಂದಿ ಕಳ್ಳರ ಗ್ಯಾಂಗ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು. ಇಷ್ಟೇ ಇವರನ್ನ ಹಿಡಿಯಲು ಪೊಲೀಸರು ಹರಸಾಹಸ ಪಟ್ಟಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿದ್ದ ದೀಪಕ್ ಚಹಾರ್, ಎಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಭಾರತದ ಪರ 1 ಏಕದಿನ ಹಾಗೂ 1 ಟಿ20 ಪಂದ್ಯ ಆಡಿದ್ದರು.