ವಿಶ್ವದ 50 ಮಂದಿ ಬ್ಯಾಡ್ಮಿಂಟನ್ ಆಟಗಾರರಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರು ಶಟ್ಲರ್‌ಗಳು ಸ್ಥಾನ ಪಡೆದಿದ್ದಾರೆ.
ನವದೆಹಲಿ(ನ.26): ಭಾರತದ ಬ್ಯಾಡ್ಮಿಂಟನ್ ಆಟಗಾರರು ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ವಿಶ್ವದ 50 ಮಂದಿ ಬ್ಯಾಡ್ಮಿಂಟನ್ ಆಟಗಾರರಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರು ಶಟ್ಲರ್ಗಳು ಸ್ಥಾನ ಪಡೆದಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಇತ್ತೀಚೀಗೆ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಕೆ. ಶ್ರೀಕಾಂತ್ (12), ಅಜಯ್ ಜಯರಾಂ (19), ಎಚ್.ಎಸ್. ಪ್ರಣಯ್ (25), ಬಿ ಸಾಯಿ ಪ್ರಣೀತ್ (36), ಸಮೀರ್ ವರ್ಮ (43) ಮತ್ತು ಸೌರಭ್ ವರ್ಮ (45)ನೇ ಸ್ಥಾನ ಪಡೆದಿದ್ದಾರೆ.
ಅಜಯ್ ಜಯರಾಂ, ಹಾಂಕಾಂಗ್ ಓಪನ್'ನ ಕ್ವಾರ್ಟರ್ನಲ್ಲಿ ಮುಗ್ಗರಿಸಿದ್ದರು. ಆದರೂ 4 ಸ್ಥಾನ ಮೇಲಕ್ಕೆ ಜಿಗಿಯುವುದರೊಂದಿಗೆ 19ನೇ ಸ್ಥಾನ ಪಡೆದಿದ್ದಾರೆ.
