ಎಂ ಎಸ್ ಧೋನಿ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಎದುರಿಗೆ ಧೋನಿ ಸಿಕ್ಕಾಗ ಹಲವರು ತಮ್ಮ ಕುತೂಹಲಗಳನ್ನ ಕೇಳಿದ್ದಾರೆ. ಇದಕ್ಕೆ ಧೋನಿ ಕೂಡ ಉತ್ತರಿಸಿದ್ದಾರೆ. ಇದೀಗ ಬಾಲಿವುಡ್ ಸಿಂಗರ್ ರಾಹುಲ್ ವೈದ್ಯ ಧೋನಿಗೆ ಬಾತ್ ರೂಂನಲ್ಲಿ ಪ್ರಶ್ನೆ ಕೇಳಿದ್ದಾರೆ. ಹಾಗಾದರೆ ರಾಹುಲ್ ಬಾತ್ ರೂಂನಲ್ಲಿ ಕೇಳಿದ ಪ್ರಶ್ನೆ ಯಾವುದು? ಅದಕ್ಕೆ ಧೋನಿ ಉತ್ತರವೇನು? ಇಲ್ಲಿದೆ.

ಮುಂಬೈ(ಜು.24): ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ, ಕ್ಯಾಪ್ಟನ್ ಕೂಲ್ ಎಂದೇ ಗುರುತಿಸಿಕೊಂಡವರು. ಅದೆಷ್ಟೇ ಒತ್ತಡದ ಸಂದರ್ಭವಿದ್ದರೂ, ಧೋನಿ ತಾಳ್ಮೆ ಕಳೆದುಕೊಂಡಿಲ್ಲ. ಕೂಲ್ ಆಗಿ ಪರಿಸ್ಥಿತಿಯನ್ನ ನಿಭಾಯಿಸಿದ ಹೆಗ್ಗಳಿಕೆಗೆ ಧೋನಿಗಿದೆ.

ಕೂಲ್ ಕ್ಯಾಪ್ಟನ್ಸಿಯಿಂದಲೇ ಐತಿಹಾಸಿಕ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎಂ ಎಸ್ ಧೋನಿಗೆ ಇದೇ ಪ್ರಶ್ನೆ ಕೇಳಲಾಗಿತ್ತು. ಆದರೆ ಈ ಪ್ರಶ್ನೆ ಕೇಳಿದ್ದು ಬಾತ್ ರೂಂನಲ್ಲಿ ಅನ್ನೋದು ವಿಶೇಷ.

ಮಂಬೈನಲ್ಲಿ ನಡೆದ ಮಾಜಿ ಸಚಿವ ಪ್ರಪುಲ್ ಪಟೇಲ್ ಪುತ್ರಿ ಪೂರ್ಣ ಪಟೇಲ್ ವಿವಾಹ ಸಮಾರಂಭದಲ್ಲಿ ಎಂ ಎಸ್ ಧೋನಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಇದೇ ಸಮಾರಂಭದಲ್ಲಿ ಎಂ ಎಸ್ ಧೋನಿಗೆ, ಬಾಲಿವುಡ್ ಸಿಂಗರ್ ರಾಹುಲ್ ವೈದ್ಯ ಬಾತ್ ರೂಂನಲ್ಲಿ ಪ್ರಶ್ನೆ ಕೇಳಿದ್ದಾರೆ.

Scroll to load tweet…

ಧೋನಿ ಬಾತ್ ರೂಂನಲ್ಲೂ ಯಾಕೆ ಕೂಲ್ ಎಂದು ಬಾತ್ ರೂಂನಲ್ಲೇ ಪ್ರಶ್ನೆ ಕೇಳಿದ್ದಾರೆ. ರಾಹುಲ್ ವೈದ್ಯ ಪ್ರಶ್ನೆಗೆ ಧೋನಿ ನನಗೆ ಗೊತ್ತಿಲ್ಲ ಎಂದು ನಕ್ಕಿದ್ದಾರೆ. ಬಳಿಕ ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಅಪ‌್‌ಲೋಡ್ ಮಾಡಿದ ರಾಹುಲ್, ಇಷ್ಟು ಕೂಲ್ ಆಗಿ ಇರಲು ಹೇಗೆ ಸಾಧ್ಯ? ಧೋನಿಯಿಂದ ಸಾಕಷ್ಟು ಕಲಿಯಲು ಇದೆ ಎಂದು ಹೇಳಿದ್ದಾರೆ.