ಸಿಂಗಾಪುರ್(ಏ.15): ಭಾರತೀಯ ಯುವ ಷಟ್ಲರ್ ಬಿ. ಸಾಯಿ ಪ್ರಣೀತ್ ಕೋರಿಯಾದ ಲೀ-ಡಾಂಗ್-ಕ್ಯುನ್ ಅವರನ್ನು ಮಣಿಸುವ ಮೂಲಕ ಸಿಂಗಾಪುರ್ ಓಪನ್ ಸೂಪರ್ ಸೀರಿಸ್'ನಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.

ಇದೇ ಜನವರಿಯಲ್ಲಿ ಸೈಯ್ಯದ್ ಮೋದಿ ಗ್ರಾಂಡ್ ಫಿಕ್ಸ್ ಗೋಲ್ಡ್'ನಲ್ಲಿ ಫೈನಲ್ ಪ್ರವೇಶಿಸಿದ್ದ ಪ್ರಣೀತ್, ಇದೀಗ ಮತ್ತೊಮ್ಮೆ ಭರ್ಜರಿ ಪ್ರದರ್ಶನದ ಮೂಲಕ ಮೂರು ಬಾರಿ ಕೋರಿಯಾ ಮಾಸ್ಟರ್ ಗ್ರಾಂಡ್ ಫಿಕ್ಸ್ ಗೋಲ್ಡ್ ಚಾಂಪಿಯನ್ ಲೀ ಅವರನ್ನು 21-6, 21-8 ನೇರ ಸೆಟ್'ಗಳಲ್ಲಿ ಮಣಿಸುವ ಮೂಲಕ ಫೈನಲ್ಸ್'ಗೆ ಲಗ್ಗೆಯಿಟ್ಟಿದ್ದಾರೆ.

ಫೈನಲ್ಸ್'ನಲ್ಲಿ ಪ್ರಶಸ್ತಿಗಾಗಿ ಸಾಯಿ ಪ್ರಣೀತ್ ಭಾರತೀಯ ಆಟಗಾರ ಕೆ. ಶ್ರೀಕಾಂತ್ ಅವರೊಂದಿಗೆ ಕಾದಾಡಲಿದ್ದಾರೆ.