ಭಾರತಕ್ಕಿಂದು ಮತ್ತೆರಡು ಪದಕ : ಚಿನ್ನ – ಕಂಚು ಗೆದ್ದು ಸಾಧನೆ

First Published 11, Apr 2018, 1:17 PM IST
Shreyasi Singh Wins Gold Om Mitharwal Bronze
Highlights

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.

ಸಿಡ್ನಿ : ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.

ಮಹಿಳೆಯರ ಶೂಟಿಂಗ್‌ ವಿಭಾಗದ ಡಬಲ್ ಟ್ರ್ಯಾಪ್‌ನಲ್ಲಿ ಭಾರತದ ಶ್ರೀಯಾಶಿ ಸಿಂಗ್‌‌ ಅವರು ಇಂದು ಚಿನ್ನದ ಪದಕ ಬೇಟೆಯಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಶೂಟರ್ ಓಂ ಪ್ರಕಾಶ್‌ ಮಿಥರ್ವಾಲ್ ಅವರಿಂದು ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.  ಪುರುಷರ 50 ಮೀಟರ್ಸ್‌ ಏರ್ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಓಂ ಪ್ರಕಾಶ್ 201.1 ಸ್ಕೋರ್ ಕಲೆಹಾಕಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಮೂಲಕ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ  ಭಾರತ 12 ಸ್ವರ್ಣ, 4 ಬೆಳ್ಳಿ ಮತ್ತು 7 ಕಂಚಿನ ಪದಕ ಗೆದ್ದು ಒಟ್ಟು 23 ಪದಕ ಗೆದ್ದಂತಾಗಿದೆ.

loader