ಜೈಪುರ[ಏ.27]: ಕನ್ನಡದ ಪ್ರತಿಭಾನ್ವಿತ ಲೆಗ್’ಸ್ಪಿನ್ನರ್ ಶೇಯಸ್ ಗೋಪಾಲ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಗೋಪಾಲ್ 12ನೇ ಆವೃತ್ತಿಯ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ದಿಗ್ಗಜ ಬ್ಯಾಟ್ಸ್’ಮನ್’ಗಳಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಗೋಪಾಲ್ ಪ್ರಸಕ್ತ ಆವೃತ್ತಿಯ ಐಪಿಎಲ್’ನಲ್ಲಿ ಆಡಿದ 12 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಯಜುವೇಂದ್ರ ಚಹಲ್ ಅವರನ್ನು ಹಿಂದಿಕ್ಕಿ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. ಇನ್ನು 11 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಗಿಸೋ ರಬಾಡ ಅಗ್ರಸ್ಥಾನದಲ್ಲಿದ್ದಾರೆ.

ಇಂದು ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಬಲಿ ಪಡೆಯುವ ಮೂಲಕ ಮತ್ತೊಬ್ಬ ಸಮಕಾಲೀನ ದಿಗ್ಗಜನ ವಿಕೆಟ್ ಕಬಳಿಸುವಲ್ಲಿ ಕನ್ನಡಿಗ ಯಶಸ್ವಿಯಾಗಿದ್ದಾರೆ. ಈ ಮೊದಲ ಐಸಿಸಿ ಏಕದಿನ ಶ್ರೇಯಾಕದಲ್ಲಿ ಮೊದಲೆರಡು ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಸಫಲವಾಗಿದ್ದರು.

ಶ್ರೇಯಸ್ ಗೋಪಾಲ್ ಈವರಗೆ ಬಲಿಪಡೆದವರ ಪಟ್ಟಿ ಇಲ್ಲಿದೆ ನೋಡಿ..
ಆಟಗಾರ             ODI ಶ್ರೇಯಾಂಕ
ವಿರಾಟ್ ಕೊಹ್ಲಿ       01
ರೋಹಿತ್ ಶರ್ಮಾ   02
ಕ್ವಿಂಟಾನ್ ಡಿಕಾಕ್   04
ಕೇನ್ ವಿಲಿಯಮ್ಸನ್ 11
ಶಿಖರ್ ಧವನ್        13
ಜಾನಿ ಬೇರ್’ಸ್ಟೋ   16

ಇದಷ್ಟೇ ಅಲ್ಲದೆ ಎಬಿ ಡಿವಿಲಿಯರ್ಸ್, ಮನೀಶ್ ಪಾಂಡೆ[2 ಬಾರಿ], ಪೃಥ್ವಿ ಶಾ, ಕ್ರಿಸ್ ಲಿನ್, ಶಿಮ್ರೋನ್ ಹೆಟ್ಮೇಯರ್, ವಿಜಯ್ ಶಂಕರ್, ನಿತಿಶ್ ರಾಣಾ ಹಾಗೂ ಸುನಿಲ್ ನರೈನ್ ವಿಕೆಟ್ ಕಬಳಿಸಿದ್ದಾರೆ.