. ಜುಲೈ 28ರಿಂದ ಪ್ರೋ ಕಬಡ್ಡಿ ಸೀಸನ್-5 ಆರಂಭವಾಗಲಿದೆ. ಆಗಸ್ಟ್ 4ರಿಂದ 10ರವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಬೇಕಿದ್ದವು.
ಬೆಂಗಳೂರು ಕಬಡ್ಡಿ ಅಭಿಮಾನಿಗಳಿ ಈ ಭಾರಿ ನಿರಾಸೆಯಾಗಿದೆ. ಈ ಸಲದ ಪ್ರೋ ಕಬಡ್ಡಿ ಲೀಗ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿಲ್ಲ ಪಂದ್ಯಗಳು ಕಂಠೀರವ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಸ್ಟೇಡಿಯಂ ನೀಡಲು ಸರ್ಕಾರ ಮೀನಮೇಷ ಏಣಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ನಾಗ್ಪುರಕ್ಕೆ ಶಿಫ್ಟ್ ಮಾಡಲಾಗಿದೆ. ಜುಲೈ 28ರಿಂದ ಪ್ರೋ ಕಬಡ್ಡಿ ಸೀಸನ್-5 ಆರಂಭವಾಗಲಿದೆ. ಆಗಸ್ಟ್ 4ರಿಂದ 10ರವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಬೇಕಿದ್ದವು. ಆದ್ರೆ ಯುವಜನ ಮತ್ತು ಕ್ರೀಡಾ ಇಲಾಖೆಯ ಬೇಜವಾಬ್ದಾರಿಯಿಂದ ಪಂದ್ಯಗಳು ಬೆಂಗಳೂರಿನಿಂದ ಶಿಫ್ಟ್ ಆಗಿವೆ. ಈಗ ನಾಗ್ಪುರ್ ಬೆಂಗಳೂರು ಬುಲ್ಸ್ ತಂಡಕ್ಕೆ ತವರಾಗಿದೆ.
