ಏಕದಿನ ಕ್ರಿಕೆಟ್‌ಗೆ ವಿದಾಯದ ನಿರ್ಧಾರ ಪ್ರಕಟಿಸಿದ ಶೋಯಿಬ್ ಮಲ್ಲಿಕ್

Shoaib Malik to retire from ODIs after 2019 World Cup
Highlights

ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಶೋಯಿಬ್ ಮಲ್ಲಿಕ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಮಲ್ಲಿಕ್ ನಿವೃತ್ತಿ ಯಾವಾಗ? ದಿಢೀರ್ ನಿವೃತ್ತಿ ಹಿಂದಿರೋ ಕಾರಣಗಳೇನು?

ಸೈಲ್‌ಕೋಟ್(ಜೂ.25):ಪಾಕಿಸ್ತಾನ ಹಿರಿಯ ಆಲ್‌ರೌಂಡರ್ ಶೋಯಿಬ್ ಮಲ್ಲಿಕ್ ಏಕದಿನ ಕ್ರಿಕೆಟ್‌ಗೆ ವಿದಾಯ ನಿರ್ಧಾರ ಪ್ರಕಟಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಮಾದರಿಯಿಂದ ನಿವೃತ್ತಿಯಾಗೋದಾಗಿ ಮಲ್ಲಿಕ್ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದ ಮೇಲೂ ಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ ಮುಂದುವರಿಯೋದಾಗಿ ಶೋಯಿಬ್ ಹೇಳಿದ್ದಾರೆ. ಫಿಟ್ನೆಸ್ ಇರುವವರೆಗೂ ಚುಟುಕು ಕ್ರಿಕೆಟ್ ಆಡೋದಾಗಿ ಮಲ್ಲಿಕ್ ಸ್ಪಷ್ಟಪಡಿಸಿದ್ದಾರೆ.

1998ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಶೋಯಿಬ್ ಮಲ್ಲಿಕ್, 2007ರಲ್ಲಿ ಪಾಕಿಸ್ತಾನ ತಂಡದ ನಾಯಕನಾಗಿಯೂ ಯಶಸ್ವಿಯಾಗಿದ್ದರು. 261 ಏಕದಿನ ಪಂದ್ಯ ಆಡಿರುವ ಮಲ್ಲಿಕ್ 6975 ರನ್ ಸಿಡಿಸಿದ್ದಾರೆ. 9 ಶತಕ, 41 ಅರ್ಧಶತಕ ಹಾಗೂ 154 ವಿಕೆಟ್ ಕಬಳಿಸಿದ್ದಾರೆ. 

2009ರ ಟಿ-ಟ್ವೆಂಟಿ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ನಾನು ತಂಡದ ಭಾಗವಾಗಿದ್ದೆ ಅನ್ನೋದು ಹೆಮ್ಮೆ. ನಾನೀಗ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕಿದೆ ಎಂದು ಮಲ್ಲಿಕ್ ಹೇಳಿದ್ದಾರೆ. 2015ರಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಲ್ಲಿಕ್ ಇದೀಗ ಏಕದಿನ ಕ್ರಿಕೆಟ್ ನಿವೃತ್ತಿಯನ್ನೂ ಘೋಷಿಸಿದ್ದಾರೆ. 

loader