ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ಲೇಟ್ ಕಟ್ ಮಾಡಲು ಹೋಗಿ ಹಿಟ್ ವಿಕೆಟ್ ಔಟಾಗಿದ್ದಾರೆ. ಇದೀಗ ಮಲ್ಲಿಕ್ ಔಟ್ ಭಾರಿ ವೈರಲ್ ಆಗಿದೆ.
ನಾಟಿಂಗ್‌ಹ್ಯಾಮ್(ಮೇ.18): ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಪಾಕಿಸ್ತಾನ ಹಿರಿಯ ಬ್ಯಾಟ್ಸ್‌ಮನ್ ಶೋಯಿಬ್ ಮಲ್ಲಿಕ್ ಹಿಟ್ ವಿಕೆಟ್ ಮೂಲಕ ಔಟಾಗಿದ್ದಾರೆ. ಮಲ್ಲಿಕ್ ಹಿಟ್ ವಿಕೆಟ್ ವಿಡೀಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ: ವಿಶ್ವಕಪ್ 2019: ಕೊಹ್ಲಿ ನಾಯಕತ್ವದ ಕುರಿತು ದ್ರಾವಿಡ್ ಅಭಿಪ್ರಾಯವೇನು?
41ನೇ ಓವರ್‌ನಲ್ಲಿ ಮಾರ್ಡ್ ವುಡ್ ಎಸೆತವನ್ನೂ ಆಫ್ ಸೈಡ್‌ಗೆ ಕಡೆ ಲೇಟ್ ಕಟ್ ಮಾಡಿದ ಶೋಯಿಬ್ ಮಲ್ಲಿಕ್, ಬಾಲ್ ಬದಲು ನೇರವಾಗಿ ವಿಕೆಟ್‌ಗೆ ಹೊಡೆದಿದ್ದಾರೆ. ಹೀಗಾಗಿ 41 ರನ್ ಸಿಡಿಸಿ ಅತ್ಯುತ್ತಮ ಹೋರಾಟ ನೀಡಿದ ಮಲ್ಲಿಕ್ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಲೇಟ್ ಕಟ್ ಮೂಲಕ ಹಿಟ್ ವಿಕೆಟ್ ಆದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಕುಖ್ಯಾತಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: 2023ರ ವಿಶ್ವಕಪ್ ಆಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ಎಬಿಡಿ..!
ಪಾಕಿಸ್ತಾನದ ವಿಶ್ವಕಪ್ ತಂಡದಲ್ಲೂ ಶೋಯಿಬ್ ಮಲ್ಲಿಕ್ ಸ್ಥಾನ ಪಡೆದಿದ್ದಾರೆ. ಇದರ ಬೆನ್ನಲ್ಲೇ ಮಲ್ಲಿಕ್ ಹಿಟ್ ವಿಕೆಟ್ ಆಗಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಪಾಕಿಸ್ತಾನ ವಿಶ್ವಕಪ್ ಟೂರ್ನಿ ಆಡಲಿದೆ.
