Asianet Suvarna News Asianet Suvarna News

ವಿಶ್ವಕಪ್ 2019: ಕೊಹ್ಲಿ ನಾಯಕತ್ವದ ಕುರಿತು ದ್ರಾವಿಡ್ ಅಭಿಪ್ರಾಯವೇನು?

2019ರ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಐಪಿಎಲ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ಚರ್ಚೆಯಾಗುತ್ತಿದೆ. ಇದೀಗ ರಾಹುಲ್ ದ್ರಾವಿಡ್ ಕೊಹ್ಲಿ ನಾಯಕತ್ವದ ಕುರಿತು ಮಾತನಾಡಿದ್ದಾರೆ.

Virat kohli quick Lerner says coach rahul dravid
Author
Bengaluru, First Published May 18, 2019, 8:26 PM IST

ಬೆಂಗಳೂರು(ಮೇ.18): ವಿಶ್ವಕಪ್ ಟೂರ್ನಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೇ.22 ರಂದು  ಇಂಗ್ಲೆಂಡ್‌ಗೆ ತೆರಳಲಿದೆ. ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಕೂಡ ರೇಸ್‌ನಲ್ಲಿದೆ. ಆದರೆ 12ನೇ ಆವೃತ್ತಿ ಐಪಿಎಲ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ಹಾಗೂ ಪ್ರದರ್ಶನ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ, ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕೊಹ್ಲಿ ನಾಯಕತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಕೊಹ್ಲಿಗೆ ಸಲಹೆ ನೀಡಿದ ವಿರೇಂದ್ರ ಸೆಹ್ವಾಗ್!

ಪ್ರತಿ ವಿದೇಶಿ ಪ್ರವಾಸದಲ್ಲಿ ಕೊಹ್ಲಿ ಸಾಕಷ್ಟು ಕಲಿತಿದ್ದಾರೆ. ಇಷ್ಟೇ ಅಲ್ಲ ಪ್ರತಿ ಪ್ರವಾಸದಲ್ಲೂ ಹಿಂದಿನ ಪ್ರವಾಸಕ್ಕಿಂತಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ತಮ್ಮ ತಪ್ಪನ್ನು ಅಷ್ಟೇ ವೇಗದಲ್ಲಿ ತಿದ್ದಿಕೊಳ್ಳುತ್ತಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಸೈನ್ಯಕ್ಕೆ ಯಶಸ್ಸು ಸಿಗಲಿದೆ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: IPL ಪ್ರದರ್ಶನದಿಂದ ಇಂಪ್ರೆಸ್-ವಿಂಡೀಸ್ ವಿಶ್ವಕಪ್ ತಂಡಲ್ಲಿ ಪೊಲಾರ್ಡ‌್‌ಗೆ ಸ್ಥಾನ?

ಪ್ರತಿ ಸರಣಿಗಳಲ್ಲಿ ಕೊಹ್ಲಿ ದಾಖಲೆ ಬರೆಯುತ್ತಿದ್ದಾರೆ. ಇದು ಕೊಹ್ಲಿ ಪ್ರದರ್ಶನಕ್ಕೆ ಸಾಕ್ಷಿ. ಹೀಗಾಗಿ 2019ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಪ್ರಶಸ್ತಿ ಗೆಲ್ಲೋ ಹೆಚ್ಚಿನ ಅವಕಾಶಗಳಿದೆ ಎಂದು ದ್ರಾವಿಡ್ ಹೇಳಿದ್ದಾರೆ. ಮೇ.30 ರಂದು ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.
 

Follow Us:
Download App:
  • android
  • ios