ಆಫ್ರಿದಿ ದಾಖಲೆಯನ್ನು ಮುರಿದ ಪಾಕ್ ಕ್ರಿಕೆಟಿಗ

First Published 3, Jul 2018, 12:34 PM IST
Shoaib Malik First Cricketer To Play 100th T20
Highlights
  • 100ನೇ ಟಿ20: ಪಂದ್ಯವಾಡಿದ ಮೊದಲಿಗ ಶೋಯೆಬ್ ಮಲಿಕ್‌
  • ಭಾರತ ತಂಡದ ಮಾಜಿ ನಾಯಕ ಎಂ. ಎಸ್‌. ಧೋನಿ ಆಡಿರುವ ಪಂದ್ಯ 90 

ಹರಾರೆ: ಅಂತಾರಾಷ್ಟ್ರೀಯ ಟಿ20ಯಲ್ಲಿ 100 ಪಂದ್ಯಗಳನ್ನು ಪೂರೈಸಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್‌ ಮಲಿಕ್‌ ಬರೆದಿದ್ದಾರೆ. 

ಇಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಪ್ರೇಲಿಯಾ ವಿರುದ್ಧದ 2ನೇ ಪಂದ್ಯವನ್ನಾಡುವ ಮೂಲಕ ಮಲ್ಲಿಕ್‌ ಈ ಸಾಧನೆ ಮಾಡಿದರು. 

ಇತ್ತೀಚೆಗಷ್ಟೇ ವಿಶ್ವ ಇಲೆವೆನ್‌ ತಂಡದ ಪರ ಆಡುವ ಮೂಲಕ ಪಾಕ್‌ನ ಶಾಹಿದ್‌ ಆಫ್ರಿದಿ (99) ಅತಿ ಹೆಚ್ಚು ಅಂ.ರಾ. ಟಿ20 ಪಂದ್ಯವನ್ನಾಡಿದ ಕ್ರಿಕೆಟಿಗ ಎನಿಸಿದ್ದರು. 

ಇದೀಗ ಮಲ್ಲಿಕ್‌, ಆಫ್ರಿದಿ ದಾಖಲೆಯನ್ನು ಮುರಿದಿದ್ದಾರೆ. ಭಾರತ ತಂಡದ ಮಾಜಿ ನಾಯಕ ಎಂ. ಎಸ್‌. ಧೋನಿ 90 ಪಂದ್ಯಗಳನ್ನಾಡಿದ್ದಾರೆ.

loader