ಕೆನಡಾ(ಆ.11): ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ  ಟೀಕೆಗೆ ಗುರಿಯಾದ ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲಿಕ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಶಾಕ್ ನೀಡಿತ್ತು. ಟಿ20 ತಂಡದ ಆಯ್ಕೆ ವೇಳೆ ಮಲಿಕ್ ಪರಿಗಣಿಸಿಲ್ಲ. ಚುಟುಕು ಕ್ರಿಕೆಟ್‌ನಲ್ಲಿ ಅವಕಾಶ ವಂಚಿತರಾಗಿದ್ದ ಮಲಿಕ್, ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಇಂಡೋ-ವಿಂಡೀಸ್ ಫೈಟ್: ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?

ವ್ಯಾನ್‌ಕೋವರ್ ನೈಟ್ಸ್ ಹಾಗೂ ಬ್ರಾಂಪ್ಟನ್ ವೋಲ್ವ್ಸ್ ನಡುವಿನ ಪಂದ್ಯದಲ್ಲಿ ಮಲಿಕ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಂದೇಶ ರವಾನಿಸಿದ್ದಾರೆ. ವ್ಯಾನ್‌ಕೋವರ್ ತಂಡದ ಪರ ಆಡುತ್ತಿರುವ ಮಲಿಕ್ ಭರ್ಜರಿ 2 ಸಿಕ್ಸರ್ ಸಿಡಿಸೋ ಮೂಲಕ ಕ್ರೀಡಾಂಗಣದ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. 13 ಮತ್ತು 16ನೇ ಓವರ್‌ನಲ್ಲಿ ಮಲಿಕ್ ಸಿಕ್ಸರ್ ಸಿಡಿಸಿದರು.

 

ಇದನ್ನೂ ಓದಿ: ಪಾಕ್‌ ಕ್ರಿಕೆಟ್‌ ಕೋಚ್‌: ಮಿಸ್ಬಾ, ಹೆಸ್ಸನ್‌ ಸ್ಪರ್ಧೆ

ಮಲಿಕ್ ಸಿಕ್ಸರ್ ಹೊಡೆತಕ್ಕೆ ಪೆವಿಲಿಯನ್ ಗಾಜು ಒಡೆದುಹೋಗಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಲಿಕ್ 26 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರು. ಈ ಮೂಲಕ ವ್ಯಾನ್‌ಕೋವರ್ ತಂಡ  77 ರನ್‌ಗಳ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಮಲಿಕ್ ಸಿಕ್ಸರ್ ಗಮನಸೆಳೆದಿದೆ.