ಭಾರತೀಯ ನಾಯಕನ ಆಟವನ್ನು ಟ್ವೀಟರ್‌'ನಲ್ಲಿ ಕೊಂಡಾಡಿರುವ ಅಖ್ತರ್, ಯುವ ಕ್ರಿಕೆಟಿಗರು ಕೊಹ್ಲಿಯಿಂದ ಬ್ಯಾಟಿಂಗ್ ಕಲೆಯನ್ನು ಕಲಿಬೇಕು ಎಂದಿದ್ದಾರೆ.

ನವದೆಹಲಿ(ಫೆ.03): ಗುರಿ ಬೆನ್ನಟ್ಟುವ ಸಂದರ್ಭ ಬಂದಾಗ ಚಿರತೆಗೆ ಪೂರ್ಣ ಪ್ರಮಾಣದಲ್ಲಿ ಪೈಪೋಟಿ ನೀಡಬಲ್ಲ ವ್ಯಕ್ತಿಯೆಂದರೇ ವಿರಾಟ್ ಕೊಹ್ಲಿ ಮಾತ್ರ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಹೇಳಿದ್ದಾರೆ.

ಭಾರತೀಯ ನಾಯಕನ ಆಟವನ್ನು ಟ್ವೀಟರ್‌'ನಲ್ಲಿ ಕೊಂಡಾಡಿರುವ ಅಖ್ತರ್, ಯುವ ಕ್ರಿಕೆಟಿಗರು ಕೊಹ್ಲಿಯಿಂದ ಬ್ಯಾಟಿಂಗ್ ಕಲೆಯನ್ನು ಕಲಿಬೇಕು ಎಂದಿದ್ದಾರೆ. ಈ ಹಿಂದೆಯೂ ಅಖ್ತರ್ ಹಲವು ಬಾರಿ ಕೊಹ್ಲಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೊಹ್ಲಿಯಂತಹ ಆಟಗಾರನ ಅವಶ್ಯಕತೆ ಇದೆ ಎಂದು ಅಖ್ತರ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

Scroll to load tweet…

ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸುವ ಮೂಲಕ ಪಾಕಿಸ್ತಾನ ಹೊರತುಪಡಿಸಿ ಐಸಿಸಿ ಪೂರ್ಣಾವಧಿ ಸದಸ್ಯತ್ವ ಪಡೆದ ರಾಷ್ಟ್ರಗಳ ನೆಲದಲ್ಲಿ ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.