ಶಿಖರ್ ಧವನ್ ತಾವಾಡುತ್ತಿರುವ 100ನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. ಈ ಮೂಲಕ 100ನೇ ಪಂದ್ಯದಲ್ಲಿ ಶತಕ ಭಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 9ನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ.

ಜೊಹಾನ್ಸ್'ಬರ್ಗ್(ಫೆ.10): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್'ಮನ್ ಶಿಖರ್ ಧವನ್ ತಾವಾಡುತ್ತಿರುವ 100ನೇ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ. ಈ ಮೂಲಕ 100ನೇ ಪಂದ್ಯದಲ್ಲಿ ಶತಕ ಭಾರಿಸಿದ ಭಾರತದ ಮೊದಲ ಹಾಗೂ ವಿಶ್ವದ 9ನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ.

Add Asianetnews Kannada as a Preferred SourcegooglePreferred

ನಾಯಕ ವಿರಾಟ್ ಕೊಹ್ಲಿ ಹಾಗೂ ಧವನ್ ಅಜೇಯ ಶತಕದ ನೆರವಿನಿಂದ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದು, ಬೆಳಕಿನ ಸಮಸ್ಯೆಯಿಂದ ಪಂದ್ಯ ಸ್ಥಗಿತವಾಗುವ ಮುನ್ನ ಭಾರತ 34.2 ಓವರ್'ಗಳಲ್ಲಿ 2 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಮತ್ತೊಮ್ಮೆ ನಿರಾಸೆ ಉಂಟು ಮಾಡಿದರು. ತಂಡದ ಮೊತ್ತ 20 ರನ್'ಗಳಿದ್ದಾಗ ಶರ್ಮಾ(5) ರಬಾಡ ಬೌಲಿಂಗ್'ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಜತೆಯಾದ ಧವನ್-ಕೊಹ್ಲಿ ಜೋಡಿ ದಿಟ್ಟವಾಗಿ ಆಫ್ರಿಕಾ ಬೌಲರ್'ಗಳನ್ನು ಎದುರಿಸಿತು. ಆಫ್ರಿಕಾ ಪಡೆಯನ್ನು ಮನಬಂದಂತೆ ದಂಡಿಸಿದ ಈ ಜೋಡಿ 158 ರನ್'ಗಳ ಜತೆಯಾಟವಾಡಿತು. ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿ 35ನೇ ಶತಕದತ್ತ ಮುನ್ನುಗ್ಗುತ್ತಿದ್ದ ವಿರಾಟ್ ಕೊಹ್ಲಿ 75 ರನ್ ಬಾರಿಸಿ ಕ್ರಿಸ್ ಮೋರಿಸ್'ಗೆ ವಿಕೆಟ್ ಒಪ್ಪಿಸಿದರು. ಆ ನಂತರ ಕೆಲವೇ ಕ್ಷಣಗಳಲ್ಲಿ ಧವನ್ ವೃತ್ತಿಜೀವನದ 13ನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. 100ನೇ ಪಂದ್ಯದಲ್ಲಿ ಶತಕ ಸಿಡಿಸಿದ 9ನೇ ಬ್ಯಾಟ್ಸ್'ಮನ್ ಎನ್ನುವ ಖ್ಯಾತಿಗೆ ಧವನ್ ಭಾಜನರಾಗಿದ್ದಾರೆ.

ಬೆಳಕಿನ ಸಮಸ್ಯೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಕ್ಕೂ ಮುನ್ನ ಭಾರತ 34.2 ಓವರ್'ಗಳಲ್ಲಿ 2 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ:200/2(34.2 ಓ)

ಧವನ್: 107*

ಕೊಹ್ಲಿ: 75

(*ವಿವರ ಅಪೂರ್ಣ)