ದ.ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಧವನ್ ಕುಟುಂಬ ಸಮೇತ ದುಬೈ ಮಾರ್ಗವಾಗಿ ದ.ಆಫ್ರಿಕಾಗೆ ಹೊರಟ್ಟಿದ್ದರು.
ನವದೆಹಲಿ(ಡಿ.29): ದಕ್ಷಿಣ ಆಫ್ರಿಕಾಗೆ ತೆರಳುತ್ತಿದ್ದ ಭಾರತ ಕ್ರಿಕೆಟಿಗ ಶಿಖರ್ ಧವನ್ ಜತೆಗಿದ್ದ ಪತ್ನಿ ಆಯೆಷಾ ಹಾಗೂ ಪುತ್ರನಿಗೆ ದುಬೈ ವಿಮಾನ ನಿಲ್ದಾಣದಲ್ಲಿ ಆಫ್ರಿಕಾದ ವಿಮಾನವೇರಲು ಅವಕಾಶ ನಿರಾಕರಿಸಿದ ಘಟನೆ ನಡೆದಿದೆ. ಸ್ವತಃ ಈ ವಿಷಯವನ್ನು ಧವನ್ ಟ್ವೀಟ್ ಮಾಡಿದ್ದು, ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದ.ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಧವನ್ ಕುಟುಂಬ ಸಮೇತ ದುಬೈ ಮಾರ್ಗವಾಗಿ ದ.ಆಫ್ರಿಕಾಗೆ ಹೊರಟ್ಟಿದ್ದರು. ದುಬೈ ವಿಮಾನನಿಲ್ದಾಣದಲ್ಲಿ ಅವರ ಪುತ್ರನ ಜನನ ನೋಂದಣಿ ಪತ್ರ ಕೇಳಿದ್ದಾರೆ. ಇದು ಇಲ್ಲದ ಕಾರಣ ವಿಮಾನವೇರಲು ಅವಕಾಶ ನೀಡಿಲ್ಲ ಎಂದು ತಿಳಿದು ಬಂದಿದೆ.
ಭಾರತ ಮೂರು ಟೆಸ್ಟ್, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.
