ಜಮೈಕ(ಜು.29): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 15 ದಿನಗಳ ಕಾಲ ಧೋನಿ ಕಾಶ್ಮೀರ ಗಡಿಯಲ್ಲಿ ಯೋಧರ ಜೊತೆ ಗಸ್ತು ತಿರುಗಲಿದ್ದಾರೆ. ಈ ಮೂಲಕ ಧೋನಿ ಭಾರತೀಯರ ದೇಶ ಭಕ್ತಿಯನ್ನು ಬಡಿದೆಬ್ಬಿಸಿದ್ದಾರೆ. ಧೋನಿ ದೇಶಪ್ರಮೇಕ್ಕೆ ವೆಸ್ಟ್ ಇಂಡೀಸ್ ವೇಗಿ ಸಲ್ಯೂಟ್ ಹೊಡೆದಿದ್ದಾರೆ.

ಇದನ್ನೂ ಓದಿ: ದೇಶ ರಕ್ಷಣೆ ಮಾಡುವ ಸೈನಿಕ ಧೋನಿಗೆ ರಕ್ಷಣೆ ಬೇಕಿಲ್ಲ: ಸೇನಾ ಮುಖ್ಯಸ್ಥ!

ವಿಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ಆರಂಭದಲ್ಲಿ ಜೈಮಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ವೆಸ್ಟ್ ಇಂಡೀಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಕಾಟ್ರೆಲ್ ಪ್ರತಿ ವಿಕೆಟ್ ಪಡೆದಾಗ ಜೈಮಾಕ ಸೇನೆಗೆ ಸಲ್ಯೂಟ್ ಸಲ್ಲಿಸೋ ಮೂಲಕ ಸಂಭ್ರಮ ಆಚರಿಸುತ್ತಾರೆ. ಇದೀಗ ಧೋನಿ ದೇಶ ಸೇವೆಯಿಂದ ಕಾಟ್ರೆಲ್ ಸ್ಪೂರ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಟ್ವೀಟ್ ಮೂಲಕ ತಮ್ಮ ಸಂದೇಶ ರವಾನಿಸಿದ್ದಾರೆ.

 

ಇದನ್ನೂ ಓದಿ: ಮ್ಯಾಚ್ ಫಿನಿಶರ್ ಧೋನಿ ಇನ್ಮುಂದೆ ಟೆರರಿಸ್ಟ್ ಫಿನಿಶರ್..!

ಧೋನಿ ವಿಡಿಯೋ ಶೇರ್ ಮಾಡಿರುವ ಕಾಟ್ರೆಲ್ ಧೋನಿ ಸ್ಪೂರ್ತಿ ಎಂದಿದ್ದಾರೆ. ಧೋನಿ ವಿಡಿಯೋವನ್ನು ಕುಟುಂಬ ಹಾಗೂ ಗೆಳೆಯರ ಜೊತೆ ಹಂಚಿಕೊಂಡಿದ್ದೇನೆ. ಕ್ರಿಕೆಟ್ ಮೈದಾನದಲ್ಲೂ ಧೋನಿ ಎಲ್ಲರಿಗೂ ಸ್ಪೂರ್ತಿ. ದೇಶದ ವಿಚಾರದಲ್ಲಿ ಧೋನಿಗೆ ಇತರ ಎಲ್ಲವೂ ನಗಣ್ಯ ಎಂದು ಟ್ವೀಟ್ ಮಾಡಿದ್ದಾರೆ.