Asianet Suvarna News Asianet Suvarna News

ದೇಶ ರಕ್ಷಣೆ ಮಾಡುವ ಸೈನಿಕ ಧೋನಿಗೆ ರಕ್ಷಣೆ ಬೇಕಿಲ್ಲ: ಸೇನಾ ಮುಖ್ಯಸ್ಥ!

ಟೀಂ ಇಂಡಿಯಾ ಕ್ರಿಕೆಟಿಗ  ಎಂ.ಎಸ್.ಧೋನಿ ಇದೀಗ ದೇಶದ ಗಡಿ ಕಾಯಲು ರೆಡಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಗಡಿ ಕಾಯಲಿರುವ ಧೋನಿಗೆ ರಕ್ಷಣೆ ಬೇಕು ಅನ್ನೋ ಮಾತಿಗೆ ಸೇನಾ ಮುಖ್ಯಸ್ಥರೇ ಪ್ರತಿಕ್ರಿಯೆ ನೀಡಿದ್ದಾರೆ. 
 

MS Dhoni doesnt need  protection will protect other citizen says army chief
Author
Bengaluru, First Published Jul 26, 2019, 7:52 PM IST
  • Facebook
  • Twitter
  • Whatsapp

ನವದೆಹಲಿ(ಜು.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇದೀಗ ಜಮ್ಮು ಮತ್ತು ಕಾಶ್ಮೀರ ಗಡಿ ಕಾಯಲು ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿರುವ ಧೋನಿ, ಸೇನೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ತೋರಿದ್ದರು. ಸದ್ಯ ತರಬೇತಿ ಪಡೆಯುತ್ತಿರು ಧೋನಿ ಜುಲೈ 31 ರಿಂದ ಕಾಶ್ಮೀರ ಕಣಿವೆಯಲ್ಲಿ ಪ್ಯಾಟ್ರೋಲಿಂಗ್ ಗಾರ್ಡ್ ಸೇವೆಗೆ ಸೇರಿಕೊಳ್ಳಲಿದ್ದಾರೆ. ಇದೇ ವೇಳೆ ಜನಪ್ರಿಯ ಕ್ರಿಕೆಟಿಗನಿಗೆ ನಾಗರಿಕರು, ಇತರ ಗುಂಪುಗಳಿಂದ ರಕ್ಷಣೆ ಕುರಿತು ಪ್ರಶ್ನೆ ಎದ್ದಿತ್ತು. ಇದೀಗ ಭಾರತೀಯ ಸೇನಾ ಮುಖ್ಯಸ್ಥ ಧೋನಿ ರಕ್ಷಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮ್ಯಾಚ್ ಫಿನಿಶರ್ ಧೋನಿ ಇನ್ಮುಂದೆ ಟೆರರಿಸ್ಟ್ ಫಿನಿಶರ್..!

ಗಡಿ ಕಾಯುವ ಸಂದರ್ಭದಲ್ಲಿ ನಾಗರಿಕರಿಂದ ಅಥವಾ ಇತರರಿಂದ ಎಂ.ಎಸ್.ಧೋನಿಗೆ ರಕ್ಷಣೆ ನೀಡುವು ಅಗತ್ಯವಿಲ್ಲ. ಧೋನಿ ನಾಗರೀಕರಿಗೆ ರಕ್ಷಣೆ ನೀಡುತ್ತಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. 15 ದಿನ ಧೋನಿ ಯೋಧರ ಜೊತೆಗೆ ಸೇವೆ ಸಲ್ಲಿಸಲಿದ್ದಾರೆ. ತರರಬೇತಿ ಮುಗಿದ ಬೆನ್ನಲ್ಲೇ ಧೋನಿ ಇತರರಿಗೆ ರಕ್ಷಣೆ ನೀಡಲಿದ್ದಾರೆ ಎಂದು ರಾವತ್ ಹೇಳಿದ್ದಾರೆ.

ಇದನ್ನೂ ಓದಿ: ಸೇನೆಗೆ ಸೇರಿಕೊಳ್ಳಲು ಕ್ರಿಕೆಟ್‌ನಿಂದ ಬ್ರೇಕ್; ಧೋನಿಗೆ ಫ್ಯಾನ್ಸ್ ಸೆಲ್ಯೂಟ್!

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ ಹುದ್ದೆ ಹೊಂದಿರುವ ಧೋನಿ, ಬಾಲ್ಯದಲ್ಲಿ ಸೇನೆ ಸೇರಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಇದೀಗ ಧೋನಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿದ್ದಾರೆ. ಸಾಮಾನ್ಯ ಯೋಧರಂತೆ ಧೋನಿ ಕೂಡ ಕಾಶ್ಮೀರದಲ್ಲಿ ಗಡಿ ಕಾಯಲಿದ್ದಾರೆ. ಪ್ಯಾರಾಚ್ಯೂಟ್ ರೆಜಿಮೆಂಟ್ ವಿಭಾಗದಲ್ಲಿ ಧೋನಿ 5 ಬಾರಿ ಸಾಹಸ ಪ್ರದರ್ಶಿಸಿ, ಸೇನಾ ಪ್ಯಾರಾಟ್ರೂಪರ್‌ಗೆ ಅರ್ಹತೆ ಪಡೆದಿದ್ದಾರೆ.
 

Follow Us:
Download App:
  • android
  • ios