ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ನಿರೀಕ್ಷೆಯಂತೆ ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅನಿಲ್‌ ಕುಂಬ್ಳೆ ಕೋಚ್‌ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತಷ್ಟುಮಂದಿಗೆ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಬಿಸಿಸಿಐ ಅವಕಾಶ ನೀಡಿದ್ದು, ಜುಲೈ 9ರ ವರೆಗೂ ಕಾಲಾವಕಾಶ ನೀಡಿದೆ.
ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅನಿಲ್ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತಷ್ಟುಮಂದಿಗೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಬಿಸಿಸಿಐ ಅವಕಾಶ ನೀಡಿದ್ದು, ಜುಲೈ 9ರ ವರೆಗೂ ಕಾಲಾವಕಾಶ ನೀಡಿದೆ.
ಎಲ್ಲಾ ಮೂರೂ ಮಾದರಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ವರ್ಷ ಶಾಸ್ತ್ರಿಯವರೇ ಪ್ರಧಾನ ಕೋಚ್ ಆದರೆ ಒಳ್ಳೇದು ಎಂದು ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದರು ಎಂದು ಹೇಳಲಾಗಿತ್ತು. ಇದೀಗ, ಕೋಚ್ ಆಯ್ಕೆಯಲ್ಲಿ ಕೊಹ್ಲಿಗೆ ಯಾವುದೇ ಅಧಿಕಾರವಿಲ್ಲ ಎಂದು ಬಿಸಿಸಿಐ ಹೇಳಿದ್ದರೂ, ಕೆಲ ಮೂಲಗಳ ಪ್ರಕಾರ ಭಾರತೀಯ ನಾಯಕನಿಗೆ ಹೊಂದಿಕೊಳ್ಳುವ ಕೋಚ್ನ ಹುಡುಕಾಟದಲ್ಲಿ ಬಿಸಿಸಿಐ ತೊಡಗಿದೆ ಎನ್ನಲಾಗಿದೆ. ಹೀಗಾಗಿ, ಇಷ್ಟುದಿನ ಸುಮ್ಮನಿದ್ದ ಶಾಸ್ತ್ರಿ ಇದೀಗ ದಿಢೀರನೆ ಅರ್ಜಿ ಸಲ್ಲಿಸಲು ಆಸಕ್ತಿ ತೋರಿರುವುದು ಕೆಲ ಪ್ರಶ್ನೆಗಳು ಉದ್ಭವವಾಗಲು ಕಾರಣವಾಗಿದ್ದು, ಕೊಹ್ಲಿ ಮನವಿ ಮೇರೆಗೆ ಶಾಸ್ತ್ರಿ ಅರ್ಜಿ ಸಲ್ಲಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕೊಹ್ಲಿಯ ನೆಚ್ಚಿನ ಅಭ್ಯರ್ಥಿಯಾಗಿದ್ದರೂ ಸಲಹಾ ಸಮಿತಿ ಸದಸ್ಯರಾಗಿರುವ ಗಂಗೂಲಿ ಜತೆ ರವಿಶಾಸ್ತ್ರಿ ಉತ್ತಮ ಸಂಬಂಧ ಹೊಂದಿಲ್ಲ. ಕಳೆದ ವರ್ಷ ತಮಗೆ ಕೋಚ್ ಸ್ಥಾನ ಕೈತಪ್ಪಲು ಗಂಗೂಲಿಯೇ ಕಾರಣ, ತಾವು ಸಂದರ್ಶನ ನೀಡುವ ವೇಳೆ ಅವರಿರಲಿಲ್ಲ ಎಂದು ಶಾಸ್ತ್ರಿ ಆರೋಪಿಸಿದ್ದರು. ಅದಕ್ಕುತ್ತರಿಸಿದ್ದ ಗಂಗೂಲಿ, ಕೋಚ್ ಹುದ್ದೆ ಅತ್ಯಂತ ಗೌರವದ ಹುದ್ದೆ. ಇದಕ್ಕೆ ಖುದ್ದಾಗಿ ಹಾಜರಾಗಿ ಸಂದರ್ಶನ ನೀಡಬೇಕೇ ಹೊರತು, ಎಲ್ಲೋ ಪ್ರವಾಸಕ್ಕೆ ತೆರಳಿ ಅಲ್ಲಿಂದಲೇ ಮಾತ ನಾಡುವುದಲ್ಲ ಎಂದಿದ್ದರು. ಇದೀಗ ಕುಂಬ್ಳೆ-ಕೊಹ್ಲಿ ವಿವಾದವನ್ನು ಇನ್ನಷ್ಟುಪರಿಪಕ್ವತೆಯೊಂದಿಗೆ ನಿಭಾಯಿಸಬೇಕಿತ್ತು ಎಂದಿರುವ ಗಂಗೂಲಿ, ಶಾಸ್ತ್ರಿ ಅರ್ಜಿ ಸಲ್ಲಿಸಿರುವುದರಲ್ಲಿ ತಪ್ಪೇನಿಲ್ಲ. ಯಾರು ಬೇಕಿದ್ದರೂ ಕೋಚ್ ಆಗಬಹುದು ಎಂದಿದ್ದಾರೆ.
