ಅನುಭವಿ ಸ್ಪಿನ್ನರ್ ನಥಾನ್ ಲಿಯಾನ್ ಅವರನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಸ್ಮಿತ್ ವಿಫಲರಾಗಿರುವ ಸ್ಟೀವನ್ ಸ್ಮಿತ್ ಆಸೀಸ್ ತಂಡ ಕಂಡ ಕೆಟ್ಟ ನಾಯಕ- ಶೇನ್ ವಾರ್ನ್
ವೆಲ್ಲಿಂಗ್ಟನ್(ನ.07): ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ‘ಅತಿ ಕೆಟ್ಟ’ ನಾಯಕ ಎಂದು ಆಸೀಸ್‌ನ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಆರೋಪಿಸಿದ್ದಾರೆ.
ಅನುಭವಿ ಸ್ಪಿನ್ನರ್ ನಥಾನ್ ಲಿಯಾನ್ ಅವರನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಸ್ಮಿತ್ ವಿಫಲರಾಗಿದ್ದಾರೆ ಎಂದು ವಾರ್ನ್ ಹೇಳಿದ್ದಾರೆ.
3ನೇ ದಿನದಾಟ ದ.ಆಫ್ರಿಕಾದ 2ನೇ ಇನಿಂಗ್ಸ್‌ನಲ್ಲಿ ಸ್ಮಿತ್, ಲಿಯಾನ್‌ಗೆ ಕೇವಲ 12 ಓವರ್‌ಗಳನ್ನು ಮಾತ್ರ ಬೌಲಿಂಗ್‌ಗೆ ಅವಕಾಶ ನೀಡಿದ್ದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ವಾರ್ನ್ ಆರೋಪ ಮಾಡಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿಯ ಪರ್ತ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 177ರನ್‌ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ಎದುರು ಪರಾಭವ ಹೊಂದಿದೆ.
