ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಇತಿಹಾಸ ನಿರ್ಮಾಣವಾಗುತ್ತಾ? ಹೌದು ಅಂತಿದ್ದಾರೆ ಶೇನ್ ವಾರ್ನ್. ಈ ಬಾರಿ ವಿರಾಟ್ ಕೊಹ್ಲಿ ಸೈನ್ಯದ ಭಾರತ ಪ್ರವಾಸ ಅವಿಸ್ಮರಣೀಯವಾಗಲಿದೆ ಎಂದಿದ್ದಾರೆ.  

ಸಿಡ್ನಿ(ನ.18): ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಇದೀಗ ಕಾಂಗರೂ ನಾಡಿನಲ್ಲಿ ಬೀಡುಬಿಟ್ಟಿದೆ. ನವೆಂಬರ್ 21 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಗೆಲುವು ಯಾರಿಗೆ ಅನ್ನೋದನ್ನ ಆಸಿಸ್ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಎಂದು ವಾರ್ನ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಗೆಲುವಿನ ನೆಚ್ಚಿನ ತಂಡವಾಗಿ ಆಸಿಸ್ ನೆಲಕ್ಕೆ ಕಾಲಿಡುತ್ತಿದೆ. ಭಾರತ ತಂಡಕ್ಕೆ ಎದುರಾಳಿಗಳ ಭಯವಿಲ್ಲ ಎಂದು ವಾರ್ನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದೆ. ಇಷ್ಟೇ ಅಲ್ಲ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ಆಸಿಸ್ ತಂಡ ಮೂರು ಮಾದರಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಇದೂ ಕೂಡ ಟೀಂ ಇಂಡಿಯಾಗೆ ಸಹಕಾರಿಯಾಗಲಿದೆ ಎಂದಿದ್ದಾರೆ.