Asianet Suvarna News Asianet Suvarna News

ವಿಶ್ವಕಪ್ ಗೆದ್ದುಕೊಟ್ಟ ನಾಯಕನ ವಿರುದ್ದವೇ ತಿರುಗಿ ಬಿದ್ದ ಶೇನ್ ವಾರ್ನ್!

ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ವಿದಾಯ ಹೇಳಿದ ಮೇಲೂ ವಿವಾದಗಳಿಂದ ಮುಕ್ತವಾಗಿಲ್ಲ. ಇದೀಗ ವಾರ್ನ್ ತಮ್ಮ ಆತ್ಮಚರಿತ್ರೆಯಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

Shane Warne blasts former Australian skipper Steve Waugh as most selfish player
Author
Bengaluru, First Published Oct 2, 2018, 4:39 PM IST

ಸಿಡ್ನಿ(ಅ.02): ಸದಾ ವಿವಾದಗಳಿಂದಲೇ ಸುದ್ದಿಯಾಗೋ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಯಶಸ್ವಿ ನಾಯಕ ಸ್ಟೀವ್ ವ್ಹಾ ವಿರುದ್ಧ ವಾರ್ನ್ ತಿರುಗಿ ಬಿದ್ದಿದ್ದಾರೆ.

ಶೇನ್ ವಾರ್ನ್ "ನೋ ಸ್ಪಿನ್‌"  ಆತ್ಮಚರಿತ್ರೆಯಲ್ಲಿ ಸ್ಟೀವ್ ವ್ಹಾ ವಿರುದ್ಧ ಬರೆದುಕೊಂಡಿದ್ದಾರೆ. ಸ್ಟೀವ್ ವ್ಹಾ ತಂಡಕ್ಕಾಗಿ ಆಡುತ್ತಿರಲಿಲ್ಲ. ವೈಯುಕ್ತಿಕ ಸರಾಸರಿ ಗಮನದಲ್ಲಿಟ್ಟುಕೊಂಡು ಆಡುತ್ತಿದ್ದರು. ಸ್ಟೀವ್ ವ್ಹಾ ಸ್ವಾರ್ಥಿ ಎಂದು ವಾರ್ನ್ ಹೇಳಿದ್ದಾರೆ.

1999ರ ವೆಸ್ಟ್ಇಂಡೀಸ್ ಪ್ರವಾಸದ ಅನುಭವೊಂದನ್ನ  ವಾರ್ನ್ ಬಿಚ್ಚಿಡು ಮೂಲಕ ಸ್ಟೀವ್ ವ್ಹಾ ಸ್ವಾರ್ಥಿ ಎಂಬುದನ್ನ ವಿವರಿಸಿದ್ದಾರೆ. ಸ್ಟೀವ್ ವ್ಹಾ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡದ ಇತರ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಸ್ಟೀವ್ ತಮ್ಮ ಬ್ಯಾಟಿಂಗ್ ಸರಾಸರಿ 50 ಕಾಪಾಡಿಕೊಳ್ಳವುದೇ ಮುಖ್ಯ ಗುರಿಯಾಗಿತ್ತು ಎಂದು ವಾರ್ನ್ ಆರೋಪಿಸಿದ್ದಾರೆ.

Follow Us:
Download App:
  • android
  • ios