ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3, ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ತಲಾ ಒಂದು ವಿಕೆಟ್ ಪಡೆದರು.
ಕಿಂಗ್ಸ್'ಟನ್(ಜು.06): ಟೀಂ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡಿಸ್ ಕೇವಲ 205 ರನ್'ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡಿಸ್ ತಂಡ ಮಂದಗತಿಯ ಆರಂಭ ಪಡೆಯಿತು. ಆರಂಭಿಕ ಇವಿನ್ ಲಿವೀಸ್'ಗೆ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ನಂತರ ಎರಡನೇ ವಿಕೆಟ್'ಗೆ ಜತೆಯಾದ ಹೋಪ್ ಸಹೋದರರು ತಂಡಕ್ಕೆ ಚೇತರಿಕೆ ನೀಡಿದರು. 46ರನ್ ಗಳಿಸಿದ ಕೈಲ್ ಹೋಪ್'ರನ್ನು ಉಮೇಶ್ ಯಾದವ್ ಬಲಿ ಪಡೆದರು. ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡುತ್ತಿದ್ದ ಶೈ ಹೋಪ್ ಅರ್ಧಶತಕ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೇಸನ್ ಹೋಲ್ಡರ್ ಹಾಗೂ ರೋಮನ್ ಪೋವೆಲ್ ತಂಡದ ಮೊತ್ತವನ್ನು 200ರ ಹತ್ತಿರ ತರುವಲ್ಲಿ ಯಶಸ್ವಿಯಾದರು.
ಆನಂತರ ಶಮಿ ಹಾಗೂ ಉಮೇಶ್ ದಾಳಿಗೆ ತರಗೆಲೆಗಳಂತೆ ಉದುರಿಹೋದ ಕೆರಿಬಿಯನ್ ಪಡೆ ನಿಗದಿತ 50 ಓವರ್'ಗಳಲ್ಲಿ 205 ರನ್ ಕಲೆಹಾಕಿತು.
ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3, ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡಿಸ್: 205/9
ಶೈ ಹೋಪ್ : 51
ಕೈಲ್ ಹೋಪ್ : 46
ಉಮೇಶ್ ಯಾದವ್ : 48/4
ವಿವರ ಅಪೂರ್ಣ
