ಈ ಮೊದಲು ಶಕೀಬ್ ಜುಲೈ 2009ರಿಂದ 2011ರವರೆಗೆ 9 ಟೆಸ್ಟ್‌'ಗಳಲ್ಲಿ ಬಾಂಗ್ಲದೇಶ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು.

ಢಾಕಾ(ಡಿ.11): ಮುಂದಿನ ತಿಂಗಳು ಜನವರಿಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ತಂಡ ನೂತನ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಆಲ್ರೌಂಡರ್ ಶಕೀಬ್ ಅಲ್ ಹಸನ್ ಮತ್ತೊಮ್ಮೆ ಟೆಸ್ಟ್ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಈಗಾಗಲೇ ಶಕೀಬ್ ಟಿ20 ತಂಡಕ್ಕೂ ನಾಯಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2011ರಿಂದ ಬಾಂಗ್ಲಾದೇಶ ತಂಡದ ನಾಯಕರಾಗಿದ್ದ ಮುಷ್ಫೀಕರ್ ರಹೀಮ್ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಕ್ಕಿಳಿಸಲಾಗಿದೆ. ಮುಷ್ಫೀಕರ್ ಬ್ಯಾಟಿಂಗ್‌'ಗೆ ಹೆಚ್ಚಿನ ಗಮನ ನೀಡಲಿ ಎಂದು ಈ ಕ್ರಮಕ್ಕೆ ಮುಂದಾಗಿದ್ದೇವೆ. ಹಾಗೆ ಮಹಮದುಲ್ಲಾರನ್ನು ಉಪನಾಯಕರಾಗಿ ನೇಮಿಸಲಾಗಿದೆ ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ನಜಮುಲ್ ಹಸನ್ ಹೇಳಿದ್ದಾರೆ.

ಈ ಮೊದಲು ಶಕೀಬ್ ಜುಲೈ 2009ರಿಂದ 2011ರವರೆಗೆ 9 ಟೆಸ್ಟ್‌'ಗಳಲ್ಲಿ ಬಾಂಗ್ಲದೇಶ ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು.