‘ಶಾಹೀದ್ ಅಫ್ರಿದಿ: ಆ್ಯನ್ ಆಟೋಬಯೋಗ್ರಫಿ’ ಎಂಬ ಪುಸ್ತಕದಲ್ಲಿ ಸುಮಾರು 20 ವರ್ಷಗಳ ತಮ್ಮ ಕ್ರೀಡಾ ಜೀವನದ ಏಳು ಬೀಳುಗಳನ್ನು, ವಿರೋಧಗಳನ್ನು, ಸ್ನೇಹಿತರನ್ನು ನೆನಪಿಸಿಕೊಳ್ಳಲು ಅಫ್ರಿದಿ ನಿರ್ಧರಿಸಿದ್ದಾರೆ.

ನವದೆಹಲಿ(ಅ.17): ತಮ್ಮ ಆತ್ಮಕಥೆ ಬಿಡುಗಡೆಗೊಳಿಸುತ್ತಿರುವ ಕ್ರೀಡಾಳುಗಳ ಪಟ್ಟಿಗೆ ಇದೀಗ ಪಾಕಿಸ್ತಾನದ ಆಲ್ರೌಂಡರ್ ಶಾಹೀದ್ ಅಫ್ರಿದಿ ಸಹ ಸೇರ್ಪಡೆಗೊಂಡಿದ್ದಾರೆ.

‘ಶಾಹೀದ್ ಅಫ್ರಿದಿ: ಆ್ಯನ್ ಆಟೋಬಯೋಗ್ರಫಿ’ ಎಂಬ ಪುಸ್ತಕದಲ್ಲಿ ಸುಮಾರು 20 ವರ್ಷಗಳ ತಮ್ಮ ಕ್ರೀಡಾ ಜೀವನದ ಏಳು ಬೀಳುಗಳನ್ನು, ವಿರೋಧಗಳನ್ನು, ಸ್ನೇಹಿತರನ್ನು ನೆನಪಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.

ಅದಲ್ಲೂ ವಿಶೇಷವಾಗಿ ಭಾರತೀಯ ಕ್ರಿಕೆಟ್ ಜತೆಗಿನ ಅವರ ಬಾಂಧವ್ಯವನ್ನು ಬಿಚ್ಚಿಡಲು ಅವರು ನಿರ್ಧರಿಸಿದ್ದಾರೆ. ಆದರೆ, ಅವರ ಅಭಿಮಾನಿಗಳು ಈ ಪುಸ್ತಕಕ್ಕಾಗಿ ಒಂದು ವರ್ಷವಾದರೂ ಕಾಯಬೇಕಿದೆ. ಏಕೆಂದರೆ, ಶಾಹೀದ್ ಅವರು ತಮ್ಮ ಆತ್ಮಕತೆಯನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಯೋಜಿಸಿದ್ದಾರೆ.