ಇಸ್ಲಾಮಾಬಾದ್(ಮೇ.06): ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಜೀವನ ಚರಿತ್ರೆ ‘ಗೇಮ್ ಚೇಂಜರ್’ನಲ್ಲಿ ತಮ್ಮ ಅನುಭವದ ಬಗ್ಗೆ ಹೇಳಿಕೊಂಡಿರುವ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಪೂರೈಸಿದ ಮರೆಯಲಾರದ ಕ್ಷಣದ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಂದು ತಾವು ಬಳಸಿದ್ದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಬ್ಯಾಟ್ ಎಂದು ಬರೆದುಕೊಂಡಿದ್ದಾರೆ.

ಅಫ್ರಿದಿ ದಾಖಲೆ ಶತಕಕ್ಕೆ ಸಚಿನ್ ಕಾರಣ- ಆತ್ಮಚರಿತ್ರೆಯಲ್ಲಿ ಸೀಕ್ರೆಟ್ ಬಹಿರಂಗ!

ಗೇಮ್ ಚೇಂಜರ್’ ಇತ್ತೀಚೆಗಷ್ಟೆ ಲೋಕಾರ್ಪಣೆಯಾಗಿದ್ದು, ಅಫ್ರಿದಿ ತಮ್ಮ ವೃತ್ತಿ ಜೀವನದ ಅನೇಕ ಅನುಭವಗಳನ್ನು ಇದರಲ್ಲಿ ಪ್ರಸ್ತಾಪಿಸಿದ್ದಾರೆ. 1996ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಲ್ಲದೆ, 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ ಕ್ಷಣ ಅವಿಸ್ಮರಣೀಯ. ಅಷ್ಟಕ್ಕೂ ಸಚಿನ್ ಬ್ಯಾಟ್ ತಮ್ಮ ಕೈಗೆ ಹೇಗೆ ಬಂತು ಎಂಬುದನ್ನೂ ಹೇಳಿ ಕೊಂಡಿರುವ ಅವರು, ಸಚಿನ್ ಬ್ಯಾಟನ್ನು ವಕಾರ್ ಯೂನಿಸ್ ಅವರಿಗೆ ಗಿಫ್ಟ್ ನೀಡಿದ್ದರು. ಅವರ ಕೈಸೇರುವ ಮೊದಲು ತಮಗೆ ಸಿಕ್ಕಿತ್ತು ಎಂದಿದ್ದಾರೆ.

ತಮ್ಮ ’ಗೇಮ್ ಚೇಂಜರ್’ನಲ್ಲಿ ಅಫ್ರಿದಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನೂ ಕಾಲೆಳೆದಿದ್ದಾರೆ.