ಸದ್ಯ, ಅಫ್ರಿದಿಯವರು ಪಾಕಿಸ್ತಾನ್ ಪ್ರೀಮಿಯರ್ ಲೀಗ್'ನಲ್ಲಿ ಆಡುತ್ತಿದ್ದಾರೆ. ಇನ್ನೂ ಎರಡು ವರ್ಷ ಪಿಪಿಎಲ್'ನಲ್ಲಿ ಅವರು ಆಡುವ ಉದ್ದೇಶ ಹೊಂದಿದ್ದಾರೆ.
ಇಸ್ಲಾಮಾಬಾದ್(ಫೆ. 20): ಪಾಕಿಸ್ತಾನದ ವಿಶ್ವಶ್ರೇಷ್ಠ ಕ್ರಿಕೆಟ್ ಆಲ್'ರೌಂಡರ್ ಶಾಹಿದ್ ಅಫ್ರಿದಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ್ದಾರೆ. ಈ ಹಿಂದೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್'ನಿಂದ ನಿವೃತ್ತರಾಗಿದ್ದ ಅಫ್ರಿದಿ ಇದೀಗ ಟಿ20 ಕ್ರಿಕೆಟ್'ಗೂ ಗುಡ್'ಬೈ ಹೇಳಿದ್ದಾರೆ. ಇದರೊಂದಿಗೆ 20 ವರ್ಷಗಳ ಅಫ್ರಿದಿ ಅಂತಾರಾಷ್ಟ್ರೀಯ ಪಯಣ ಅಧಿಕೃತವಾಗಿ ಅಂತ್ಯಗೊಂಡಂತಾಗಿದೆ.
ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್'ನಲ್ಲಿ ಅಫ್ರಿದಿ ಅವರು ಪಾಕ್ ತಂಡವನ್ನು ಮುನ್ನಡೆಸಿದ್ದರು. ಅದಾದ ಬಳಿಕ ಅಫ್ರಿದಿ ನಿವೃತ್ತಿ ಘೋಷಿಸುವ ನಿರೀಕ್ಷೆ ಇತ್ತು. ಆದರೆ, ನಾಯಕತ್ವದಿಂದ ಕೆಳಗಿಳಿದರೇ ವಿನಃ ಅಫ್ರಿದಿ ರಿಟೈರ್ಮೆಂಟ್ ಘೋಷಿಸಿರಲಿಲ್ಲ. ಅದಾದ ಬಳಿಕ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಳಿಗೆ ಪಾಕ್ ತಂಡದಿಂದ ಅಫ್ರಿದಿಯನ್ನು ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಫ್ರಿದಿ ಅನಿವಾರ್ಯವಾಗಿ ನಿವೃತ್ತಿ ಘೋಷಿಸುವ ಸ್ಥಿತಿ ನಿರ್ಮಾಣವಾಗಿತ್ತು.
ಅಫ್ರಿದಿ ಅವರು ಅಂತಾರಾಷ್ಟ್ರೀಯ ಪಂದ್ಯವಾಡಿ ಗೌರವಪೂರ್ಣವಾಗಿ ನಿವೃತ್ತಿಯಾಗುವ ಬಯಕೆ ಹೊಂದಿದ್ದರಂತೆ. ಆದರೆ, ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಇದಕ್ಕೆ ಆಸ್ಪದ ನೀಡಲಿಲ್ಲ. 20 ವರ್ಷ ಪಾಕ್ ಕ್ರಿಕೆಟ್'ಗೆ ಅಪೂರ್ವ ಸೇವೆ ಒದಗಿಸಿದ್ದ ಅಫ್ರಿದಿ ದಿಢೀರ್ ನಿವೃತ್ತಿಯಾಗುವ ಸ್ಥಿತಿ ಬಂದದ್ದು ಶೋಚನೀಯ. ಅಫ್ರಿದಿ ಇನ್ನೆರಡು ಟಿ20 ಪಂದ್ಯಗಳನ್ನಾಡಿದ್ದರೆ ನೂರು ಪಂದ್ಯಗಳ ಮೈಲಿಗಲ್ಲು ಮುಟ್ಟಿದ ಮೊದಲ ಆಟಗಾರನೆಂಬ ಗೌರವಕ್ಕೆ ಪಾತ್ರರಾಗುತ್ತಿದ್ದರು.
ಸದ್ಯ, ಅಫ್ರಿದಿಯವರು ಪಾಕಿಸ್ತಾನ್ ಪ್ರೀಮಿಯರ್ ಲೀಗ್'ನಲ್ಲಿ ಆಡುತ್ತಿದ್ದಾರೆ. ಇನ್ನೂ ಎರಡು ವರ್ಷ ಪಿಪಿಎಲ್'ನಲ್ಲಿ ಅವರು ಆಡುವ ಉದ್ದೇಶ ಹೊಂದಿದ್ದಾರೆ.
ಶಾಹಿದ್ ಅಫ್ರಿದಿ ಕ್ರಿಕೆಟ್ ಅಂಕಿ-ಅಂಶ
ಟೆಸ್ಟ್ ಕ್ರಿಕೆಟ್:
ಪಂದ್ಯ: 27
ರನ್: 1,716
ಸರಾಸರಿ: 36.51
ಶತಕ: 5
ಅರ್ಧಶತಕ: 8
ವಿಕೆಟ್: 48
ಏಕದಿನ ಕ್ರಿಕೆಟ್:
ಪಂದ್ಯ: 398
ರನ್: 8,064
ಸರಾಸರಿ: 23.57
ಶತಕ: 6
ಅರ್ಧಶತಕ: 39
ವಿಕೆಟ್: 395
ಟಿ20 ಕ್ರಿಕೆಟ್:
ಪಂದ್ಯ: 98
ರನ್: 1,505
ಸರಾಸರಿ: 18.01
ಅರ್ಧಶತಕ: 4
ವಿಕೆಟ್: 97
