ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾಹೀದ್ ಅಫ್ರಿದಿ ಇದೀಗ ವಿವಾದಕ್ಕೊಳಗಾಗಿದ್ದಾರೆ.
ಕರಾಚಿ[ಜೂ.11]: ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾಹೀದ್ ಅಫ್ರಿದಿ ಇದೀಗ ವಿವಾದಕ್ಕೊಳಗಾಗಿದ್ದಾರೆ.
ವಿಕೆಟ್ ಕಬಳಿಸಿದ ಬಳಿಕ ಎರಡು ಕೈ ಎತ್ತಿ ವಿಶಿಷ್ಟವಾಗಿ ಸಂಭ್ರಮಿಸುವ ಅಫ್ರಿದಿಯ ಈ ಸ್ಟೈಲ್ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಈಗ ಅಂತಹದ್ದೇ ಸಂಭ್ರಮಾಚರಣೆಯನ್ನು ಅಫ್ರಿದಿ ಮಗಳು ಮಾಡಿದ್ದಾಳೆ. ಅದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅರೇ ಅದರಲ್ಲೇನು ವಿವಾದ ಎನ್ನುತ್ತೀರಾ..?
ಹೌದು, ಇದಿಷ್ಟೇ ಆಗಿದ್ದರೆ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿತ್ತು. ಆದರೆ ಅಫ್ರಿದಿ ಮಗಳ ಹಿಂದೆ ಸಿಂಹವಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
