ಧೋನಿ ಜಗತ್ತಿನ ಕೂಲ್ ಕ್ಯಾಪ್ಟನ್: ಅಫ್ರಿದಿ

Kohli favourite Indian cricketer Dhoni coolest captain in the world Shahid Afridi
Highlights

2009ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಟಿ20 ಟೂರ್ನಿಯ ಫೈನಲ್’ನಲ್ಲಿ ಅಫ್ರಿದಿ ಕಡೆಯ ಬಾರಿ ಕಣಕ್ಕಿಳಿದಿದ್ದರು. ಅದೇ ಪಂದ್ಯದಲ್ಲಿ ಅಫ್ರಿದಿ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 

ಕರಾಚಿ[ಮೇ.11]: ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಮರಳಲು ಸಜ್ಜಾಗಿದ್ದಾರೆ. ವೆಸ್ಟ್’ಇಂಡಿಸ್ ವಿರುದ್ಧ ಮೇ.31ರಂದು ನಡೆಯಲಿರುವ ಟಿ20 ಪಂದ್ಯದಲ್ಲಿ ವಿಶ್ವ ಇಲವೆನ್ ತಂಡದ ಪರ ಅಫ್ರಿದಿ ಕಣಕ್ಕಿಳಿಯಲಿದ್ದಾರೆ.
ಮತ್ತೊಮ್ಮೆ ಅಫ್ರಿದಿ ಲಾರ್ಡ್ಸ್ ಮೈದಾನದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. 2009ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಟಿ20 ಟೂರ್ನಿಯ ಫೈನಲ್’ನಲ್ಲಿ ಅಫ್ರಿದಿ ಕಡೆಯ ಬಾರಿ ಕಣಕ್ಕಿಳಿದಿದ್ದರು. ಅದೇ ಪಂದ್ಯದಲ್ಲಿ ಅಫ್ರಿದಿ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ರಿಕೆಟಿಗರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಅಫ್ರಿದಿ ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.
ಇನ್ನು ಮಾಜಿ ನಾಯಕ ಎಂ.ಎಸ್ ಧೋನಿ ಜಗತ್ತಿನ ಕೂಲ್ ಕ್ಯಾಪ್ಟನ್ ಎಂದು ಹೇಳಿದ್ದಾರೆ. ಚೊಚ್ಚಲ ಟಿ20 ವಿಶ್ವಕಪ್’ನಿಂದ ಹಿಡಿದು ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಟೀಂ ಇಂಡಿಯಾವನ್ನು ಟೆಸ್ಟ್ ನಂ.1 ಸ್ಥಾನಕ್ಕೇರಿಸುವವರೆಗೂ ಪ್ರಮುಖ ಪಾತ್ರವಹಿಸಿದ ಓರ್ವ ಅದ್ಭುತ ನಾಯಕ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

loader