ಪಂದ್ಯ ಮುಕ್ತಾಯದ ಬಳಿಕ ಭಾರತೀಯ ಅಭಿಮಾನಿಯೊಟ್ಟಿಗೆ ಸೆಲ್ಫಿ ತೆಗಿಸಿಕೊಳ್ಳುವಾಗ ಅಫ್ರಿದಿ ಏನ್ ಹೇಳಿದ್ದು ನೀವೇ ನೋಡಿ..

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಐಸ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತೀಯರ ಹೃದಯಗೆದ್ದಿದ್ದಾರೆ.

ಹೌದು, ಪಾಕಿಸ್ತಾನ ಜನಪ್ರಿಯ ಮಾಜಿ ಕ್ರಿಕೆಟಿಗ ಅಫ್ರಿದಿ, ಭಾರತೀಯ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಭಾವುಟವನ್ನು ಸರಿಯಾಗಿ ಹಿಡಿದುಕೊಳ್ಳಿ ಎಂದು ಹೇಳುವ ಮೂಲಕ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Scroll to load tweet…

ಸ್ವಿಟ್ಜರ್'ಲ್ಯಾಂಡ್'ನಲ್ಲಿ ನಡೆದ ಐಸ್ ಕ್ರಿಕೆಟ್ ಟೂರ್ನಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಜ್ಯಾಕ್ ಕಾಲೀಸ್, ಗ್ರೆಮ್ ಸ್ಮಿತ್, ಜಹೀರ್ ಖಾನ್ ಮುಂತಾದ ಕ್ರಿಕೆಟಿಗರು ಮೈಚಳಿ ಬಿಟ್ಟು ಆಡಿದರು. ಎರಡು ಪಂದ್ಯಗಳ ಸರಣಿಯಲ್ಲಿ ವಿರೇಂದ್ರ ಸೆಹ್ವಾಗ್ ನೇತೃತ್ವದ ಡೈಮಂಡ್ಸ್ ಇಲೆವನ್ ವಿರುದ್ಧ ಶಾಹಿದ್ ಅಫ್ರಿದಿ ನೇತೃತ್ವದ ರಾಯಲ್ಸ್ ಇಲೆವನ್ 2-0 ಅಂತರದಲ್ಲಿ ಜಯಭೇರಿ ಬಾರಿಸಿತು.

Scroll to load tweet…
Scroll to load tweet…

ಪಂದ್ಯ ಮುಕ್ತಾಯದ ಬಳಿಕ ಭಾರತೀಯ ಅಭಿಮಾನಿಯೊಟ್ಟಿಗೆ ಸೆಲ್ಫಿ ತೆಗಿಸಿಕೊಳ್ಳುವಾಗ ಅಫ್ರಿದಿ ಏನ್ ಹೇಳಿದ್ದು ನೀವೇ ನೋಡಿ..