ದುಬೈ[ಡಿ.03]: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ, ಸಿಕ್ಸರ್’ಗಳ ಮಳೆ ಸುರಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದ್ದಾರೆ. 

ಸೆಹ್ವಾಗ್ ಪಾಕಿಸ್ತಾನದ ಈ ಬೌಲರ್ ಎದುರಿಸಲು ಹೆದರುತ್ತಿದ್ದರಂತೆ..!

ಇಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್ ಫೈನಲ್ ಅರ್ಹತಾ ಪಂದ್ಯದಲ್ಲಿ ನಾರ್ಥರ್ ವಾರಿರ್ಸ್ ವಿರುದ್ಧ ಪಾಕ್ತೂನ್ಸ್ ತಂಡದ ಪರ ಅಫ್ರಿದಿ, ಕೇವಲ 14 ಎಸೆತಗಳಲ್ಲಿ 50 ರನ್ ಸಿಡಿಸಿದ್ದಾರೆ. ಅಫ್ರಿದಿ ತಾವು ಆಡಿರುವ 17 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಪಾಕ್ತೂನ್ಸ್, 13 ರನ್’ಗಳಿಂದ ಗೆಲುವು ಸಾಧಿಸಿ ಫೈನಗೇರಿದೆ. ಅಲ್ಲದೆ ನಾರ್ಥ ವಾರಿಯರ್ಸ್ ಪರ ರೋವ್ಮನ್ ಪಾವೆಲ್, 35 ಎಸೆತಗಳಲ್ಲಿ 80 ರನ ಸಿಡಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಪಾಕ್‌ಗೆ ಕಾಶ್ಮೀರ ಏಕೆ ಬೇಕು?: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ!

ವಹಾಜ್ ರಿಯಾಜ್ ಓವರ್’ನಲ್ಲಿ ಸತತ 4 ಸಿಕ್ಸರ್ ಸಿಡಿಸುವುದರೊಂದಿಗೆ 26 ರನ್ ಚಚ್ಚಿದರು. ಹೀಗಿತ್ತು ಆ ಕ್ಷಣ..